ಉಕ್ರೇನ್-ರಷ್ಯಾ ಯುದ್ಧಕ್ಕೆ ಬರೋಬ್ಬರಿ 1 ತಿಂಗಳು- ಕೀವ್ ಪ್ರವೇಶಿಸುವಲ್ಲಿ ರಷ್ಯಾ ವಿಫಲ ಯತ್ನ

Public TV
1 Min Read

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ ಬರೋಬ್ಬರಿ ಒಂದು ತಿಂಗಳು. ಆದರೆ ರಷ್ಯಾ ನಿರೀಕ್ಷಿಸಿದಂತೆ ಯುದ್ಧರಂಗದಲ್ಲಿ ಏನೂ ನಡೆಯುತ್ತಿಲ್ಲ. ಉಕ್ರೇನ್ ಸೈನಿಕರ ಉಕ್ಕಿನಂತಹ ಸಂಕಲ್ಪದ ಮುಂದೆ ರಷ್ಯಾದ ಆಯುಧ ಶಕ್ತಿಗೂ ಏನೂ ಮಾಡಲು ಆಗ್ತಿಲ್ಲ.

ರಷ್ಯಾ ಸೇನೆಯ ದಾಳಿಯ ಧಾಟಿಗೆ ಹಲವು ನಗರಗಳು ಧ್ವಂಸಗೊಳ್ಳುತ್ತಿದ್ದರೂ, ಉಕ್ರೇನಿಗರ ಆತ್ಮಸ್ಥೈರ್ಯ ಒಂದಿನಿತೂ ಕುಸಿದಿಲ್ಲ. ಈವರೆಗೂ ರಾಜಧಾನಿ ಕೀವ್ ಅನ್ನು ಪ್ರವೇಶಿಸಲು ರಷ್ಯಾ ಪಡೆಗಳಿಗೆ ಆಗಿಲ್ಲ. ಈ ಹೊತ್ತಲ್ಲಿ ಹೊರಗೆ ಬಂದಿರುವ ಒಂದು ಕಥನ ಉಕ್ರೇನಿಗರ ಧೈರ್ಯ ಸಾಹಸಗಳನ್ನು ಅನಾವರಣ ಮಾಡಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧದ ನಡುವೆಯೇ ಮುರಿದು ಬಿತ್ತು ಪುಟಿನ್‌ ಮಗಳ ಮದುವೆ!

ಉಕ್ರೇನ್‍ನ ಸಣ್ಣ ಪಟ್ಟಣ ವೋಜ್ನೇ-ಸೇನ್ಸ್ಕ್. ರಷ್ಯಾ ಸೇನೆ ಎರಡು ವಾರ ಘನಘೋರ ಯುದ್ಧ ಮಾಡಿದರೂ ಇಲ್ಲಿನ ಪ್ರಮುಖ ಸೇತುವೆ ಮೇಲೆ ಹಿಡಿತ ಸಾಧಿಸಲು ಆಗಲಿಲ್ಲ. ಉಕ್ರೇನ್ ಸೈನಿಕರು ಮತ್ತು ಸ್ಥಳೀಯರ ವಿರೋಚಿತ ಹೋರಾಟದ ಮುಂದೆ ರಷ್ಯಾ ಸೇನೆಯ ಆಟ ನಡೆದಿಲ್ಲ. ಆ ಸೇತುವೆಯನ್ನೇ ಉಡೀಸ್ ಮಾಡಿದ ಉಕ್ರೇನ್ ಜನತೆ, ರಷ್ಯಾದ ಸೈನಿಕರನ್ನು ಸುಮಾರು 100 ಕಿಲೋಮೀಟರ್ ಹಿಂದಕ್ಕೆ ಅಟ್ಟಾಡಿಸಿಕೊಂಡು ಹೋಗಿದ್ರು. ಈ ಹೋರಾಟ ನಡೆದು ಮೂರು ವಾರ ಕಳೆದಿವೆ.

ಈಗಲೂ ಈ ಪಟ್ಟಣದ ಸನಿಹಕ್ಕೆ ವಾಪಸ್ ಬರಲು ರಷ್ಯಾಗೆ ಆಗಿಲ್ಲ. ಒಂದೊಮ್ಮೆ ಈ ಸೇತುವೆ ರಷ್ಯಾ ಹಿಡಿತಕ್ಕೆ ಸಿಕ್ಕಿದ್ದಲ್ಲಿ ಬಂದರು ನಗರಿ ಒಡೆಸ್ಸಾ ಯಾವಾಗಲೋ ರಷ್ಯಾ ವಶವಾಗುತ್ತಿತ್ತು. ಅಂದ ಹಾಗೇ, ಇದೇ ಕೋಪದಲ್ಲಿ ಉಕ್ರೇನ್ ಮೇಲೆ ರಷ್ಯಾ ಸೇನೆ ಇಂದು ಫಾಸ್ಫರಸ್ ಬಾಂಬ್ ಪ್ರಯೋಗಿಸಿದೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

Share This Article
Leave a Comment

Leave a Reply

Your email address will not be published. Required fields are marked *