ಸ್ಫರ್ಧೆಯಲ್ಲಿ ಭಾಗವಹಿಸಿದ ವಿಕಲಚೇತನ ವ್ಯಕ್ತಿಯ ಡ್ಯಾನ್ಸ್ ವಿಡಿಯೋ ವೈರಲ್!

Public TV
1 Min Read

ಪುಣೆ: ಒಂದು ಕಾಲನ್ನು ಹೊಂದಿರುವ ವಿಕಲ ಚೇತನ ವ್ಯಕ್ತಿಯೊಬ್ಬರು ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ನಂತರ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಭಾನುವಾರ ಪುಣೆಯಲ್ಲಿ ಆಫ್ ಮ್ಯಾರಥಾನ್ ಅನ್ನು ಆಯೋಜಿಸಲಾಗಿತ್ತು. ಅದರಲ್ಲಿ ವಿಕಲಚೇತನ ಜಾವೇದ್ ರಂಜಾನ್ ಚೌಧರಿ ಪಾಲ್ಗೊಂಡು ನಂತರ ಸಖತ್ ಸ್ಟೆಪ್ ಹಾಕಿದ್ದಾರೆ.

ಮೂಲತಃ ಮಹಾರಾಷ್ಟ್ರದ ಬುಲ್‍ಧನ್ ಜಿಲ್ಲೆಯ ಲೋನಾರ್ ನವರಾದ ಜಾವೇದ್ ವೀಲ್‍ಚೇರ್ ಬಾಸ್ಕೆಟ್‍ಬಾಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನರು ನನಗೆ ಮಾಡಲು ಸಾಧ್ಯವಿಲ್ಲ ಎಂದಿದ್ದನ್ನು ನಾನು ಮಾಡಿ ತೋರಿಸಿದ್ದೇನೆ. ಬೈಕ್ ಸಾಹಸಗಳನ್ನು ಸಹ ಮಾಡುತ್ತೇನೆ ಎಂದು ಜಾವೇದ್ ಸಂತಸ ವ್ಯಕ್ತಪಡಿಸಿದ್ದಾರೆ.

2015 ರಲ್ಲಿ ಬೈಕ್ ಅಪಘಾತದಲ್ಲಿ ನಾನು ಒಂದು ಕಾಲನ್ನು ಕಳೆದುಕೊಂಡಿದ್ದೇನೆ. ಬಾಸ್ಕೆಟ್ ಬಾಲ್, ಸ್ವಿಮ್ಮಿಂಗ್ ಹೊರತುಪಡಿಸಿ, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ನನ್ನ ಕುಟುಂಬದಲ್ಲಿ ಯಾರೂ ವಿದ್ಯಾವಂತರಾಗಿಲ್ಲ, ನಾನೇ ಕುಟುಂಬಕ್ಕೆ ಮೊದಲ ಪದವೀಧರರಾಗಿದ್ದೇನೆ ಎಂದು ಜಾವೇದ್ ಹೇಳಿದ್ದಾರೆ.

ಈ ಆಫ್ ಮ್ಯಾರಥಾನ್ ನಲ್ಲಿ 21 ಕಿ.ಮೀ, 10 ಕಿ.ಮೀ ಮತ್ತು 6 ಕಿ.ಮೀ. ಎಂದು ಮೂರು ವಿಭಿನ್ನ ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಸುಮಾರು 2500 ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜಾವೇದ್‍ಗೂ ಸೇರಿದಂತೆ ಪ್ರತಿ ಸ್ಪರ್ಧಿಗಳಿಗೂ ಪದಕಗಳನ್ನು ಮತ್ತು ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ವಚ್ಛ ಭಾರತ್ ಪ್ರಮಾಣಪತ್ರವನ್ನು ಈ ವೇಳೆ ನೀಡಲಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *