AIADMK-BJP Split- ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ: ಉದಯನಿಧಿ ಸ್ಟಾಲಿನ್

Public TV
1 Min Read

ಚೆನ್ನೈ: ಬಿಜೆಪಿ (BJP) ನೇತೃತ್ವದ ಎನ್‍ಡಿಎ ಒಕ್ಕೂಟದೊಂದಿಗಿನ 4 ವರ್ಷಗಳ ಮೈತ್ರಿಯಿಂದ ಹೊರಬಂದಿರುವುದಾಗಿ ಎಐಎಡಿಎಂಕೆ (AIADMK) ಹೇಳಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ ಎಂಬಂತೆ ಎರಡೂ ಪಕ್ಷಗಳು ಒಟ್ಟಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಬಹುದು. ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಹೀಗೆ ಆಗುತ್ತಿರುವುದು ಇದು ಮೊದಲೇನಲ್ಲ. ಎಐಎಡಿಎಂಕೆ ಮತ್ತು ಬಿಜೆಪಿ ಜಗಳವಾಡಬಹುದು ಆದರೆ ಚುನಾವಣೆಯ ಸಮಯದಲ್ಲಿ ಅವರು ಮತ್ತೆ ಒಂದಾಗುತ್ತಾರೆ ಏಕೆಂದರೆ ಒಬ್ಬರು ದರೋಡೆಕೋರರು ಮತ್ತು ಇನ್ನೊಬ್ಬರು ಕಳ್ಳರು ಎಂದು ಸ್ಟಾಲಿನ್ ಹೇಳಿದರು. ಇದನ್ನೂ ಓದಿ: ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ

ದೋಸ್ತಿ ಖತಂಗೆ ಕಾರಣವೇನು?: ಜಯಲಲಿತಾ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಅಣ್ಣಾಮಲೈ ಮಾತನಾಡಿದ್ದರು. ಪಕ್ಷದ ಸಂಸ್ಥಾಪಕ ಅಣ್ಣಾದುರೈ ಬಗ್ಗೆ ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಣ್ಣಾಮಲೈ ಬಗ್ಗೆ ದೂರು ಕೊಟ್ಟರೂ ಹೈಕಮಾಂಡ್ ಸ್ಪಂದಿಸಲಿಲ್ಲ ಎಂಬ ಕೋಪವೂ ಇದೆ. ಇನ್ನು ಪೆರಿಯಾರ್ವಾವಾದದ ವಿರುದ್ಧ ಬಿಜೆಪಿಗರ ನಿರಂತರ ವಾಗ್ದಾಳಿ ನಡೆಸಿತ್ತು. ಬಿಜೆಪಿ ಜೊತೆ ಕೈಜೋಡಿಸಿದ್ದರಿಂದಲೇ ಕಳೆದ ಬಾರಿ ಸೋಲು ಎಂಬ ಅಭಿಪ್ರಾಯಕ್ಕೆ ಅಣ್ಣಾಡಿಎಂಕೆ ಬಂದಿದ್ದು, ಸೀಟು ಹಂಚಿಕೆ ಸಂಬಂಧ ಬಿಜೆಪಿ ಜೊತೆ ಒಮ್ಮತದ ಸಹಮತ ಮೂಡದ ಪರಿಣಾಮ ಬಿಜೆಪಿಗೆ ಶಾಕ್ ನೀಡಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್