ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, ಮೂವರಿಗೆ ಗಾಯ

Public TV
2 Min Read

– ಮತ್ತೊಂದೆಡೆ ಲಾರಿಗಳ ಮಧ್ಯೆ ಸರಣಿ ಅಪಘಾತ, ತಪ್ಪಿದ ಅನಾಹುತ

ಧಾರವಾಡ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಧಾರವಾಡ (Dharwad) ಪಿಬಿ ರಸ್ತೆ ಬಳಿ ನಡೆದಿದೆ. ಜಿಲ್ಲೆಯ ಕೆಲಗೇರಿ ನಿವಾಸಿ ಶಿವಾನಂದ ಅಡಿವೆಪ್ಪ ಮಾಳಗಿ(38) ಮೃತ ದುರ್ದೈವಿ.

ಶಿವಾನಂದ ಹಾಗೂ ಮಂಜುನಾಥ ಹುಬ್ಬಳ್ಳಿಯಿಂದ ಧಾರವಾಡದತ್ತ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಧಾರವಾಡದ ಮಾಡರ್ನ್ ಹಾಲ್ ಎದುರು ಬರುತ್ತಿದ್ದಂತೆ ಧಾರವಾಡಿದಿಂದ ಹುಬ್ಬಳ್ಳಿ (Hubballi) ಮಾರ್ಗವಾಗಿ ಗದಗಕ್ಕೆ ಹೊರಟಿದ್ದ ಇನ್ನೋವಾ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಕಾಶ್ಮೀರದ ವಿಚಾರದಲ್ಲಿ ಪ್ರಧಾನಿಗಳು ಬಿಗಿ ಕ್ರಮ ತೆಗೆದುಕೊಂಡಿದ್ದಾರೆ: ಹೆಚ್.ಡಿ ದೇವೇಗೌಡ

ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಶಿವಾನಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಚಾಲಕ ಮಂಜುನಾಥ್‌ಗೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರಿನಲ್ಲಿದ್ದ ಗದಗ ಮೂಲದ ಮನೀಶರೆಡ್ಡಿ, ಬಸವರೆಡ್ಡಿ ಹುಚ್ಚಣ್ಣವರ ಹಾಗೂ ಮಂಜುನಾಥರೆಡ್ಡಿ ಸಾಸಿವೆಹಳ್ಳಿ ಎಂಬುವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕ್ಸತೆ ನೀಡಲಾಗಿದೆ. ಇದನ್ನೂ ಓದಿ: ಡೋಂಟ್ವರಿ ಸಿಎಸ್‌ಕೆ ಬೇಬಿಮಾ – ಸಿಎಸ್‌ಕೆ ಅಭಿಮಾನಿಗಳನ್ನ ರೊಚ್ಚಿಗೆದ್ದು ಕಿಚಾಯಿಸಿದ ಆರ್‌ಸಿಬಿ ಫ್ಯಾನ್ಸ್‌

ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆಯ ಪೊಲೀಸರು (Dharwad) ಭೇಟಿ ನೀಡಿದ್ದು, ಅಪಘಾತಗೊಂಡ ಎರಡು ಕಾರುಗಳನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸುವ ಕಾರ್ಯ ನಡೆಸಿದರು. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಸ್:2 – ಬೈಪಾಸ್ ರಸ್ತೆಯಲ್ಲಿ ಲಾರಿಗಳ ಮಧ್ಯೆ ಸರಣಿ ಅಪಘಾತ
ಮೂರು ಲಾರಿಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ್ದು, ತುಂಬಿದ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿ (Cylinder Lorry) ರಸ್ತೆ ಪಕ್ಕಕ್ಕೆ ಪಲ್ಟಿಯಾಗಿರುವ ಘಟನೆ ಧಾರವಾಡ ತಾಲೂಕಿನ ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಇದನ್ನೂ ಓದಿ: ಮತ್ತೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ ಜೋಡಿ?

ಟೈಲ್ಸ್ ಹೊತ್ತೊಯ್ಯುತ್ತಿದ್ದ ಲಾರಿ, ಕಾಂಕ್ರೀಟ್ ಮಿಕ್ಸ್ ಲಾರಿ ಹಾಗೂ ಗ್ಯಾಸ್ ಸಿಲಿಂಡರ್ ಹೊತ್ತೊಯ್ಯುತ್ತಿದ್ದ ಲಾರಿಗಳ ಮಧ್ಯೆ ಸರಣಿ ಅಪಘಾತವಾಗಿದೆ. ಟೈಲ್ಸ್ ಹಾಗೂ ಕಾಂಕ್ರೀಟ್ ಮಿಕ್ಸ್ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಹಿಂದೆ ಬರುತ್ತಿದ್ದ ಸಿಲಿಂಡರ್ ಲಾರಿಯು ಟೈಲ್ಸ್ ಲಾರಿಗೆ ಡಿಕ್ಕಿ ಹೊಡೆದು ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಇದನ್ನೂ ಓದಿ: ರೋಚಕ ಪಂದ್ಯದಲ್ಲಿ ಕೆಕೆಆರ್‌ಗೆ 1 ರನ್‌ ಜಯ, ಪ್ಲೇ ಆಫ್‌ ಕನಸು ಜೀವಂತ – ಹೋರಾಡಿ ಸೋತ ರಾಜಸ್ಥಾನ್‌

ಲಾರಿಯಲ್ಲಿ ಗ್ಯಾಸ್ ತುಂಬಿದ ಸಿಲಿಂಡರ್ ಇದ್ದ ಕಾರಣ ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಲಾರಿಯನ್ನು ಮೇಲೆತ್ತುವ ಕೆಲಸ ಮಾಡಿದರು. ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article