2 ವರ್ಷದ ಹಿಂದೆ ಹುಡುಗಿಯನ್ನು ಚುಡಾಯಿಸಿದಕ್ಕೆ ಧಮ್ಕಿ ಹಾಕಿದ್ದವನ ಮೇಲೆ ಹಲ್ಲೆ – ಓರ್ವ ಸಾವು

Public TV
2 Min Read

ಕೋಲಾರ: 2 ವರ್ಷದ ಹಿಂದೆ ಹುಡುಗಿಯನ್ನು ಚುಡಾಯಿಸಿದಕ್ಕೆ ಧಮ್ಕಿ ಹಾಕಿದ್ದವನ ಮೇಲೆ ಗ್ಯಾಂಗೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಟೇಕಲ್ ಮೂಲದ ರಾಕೇಶ್ ಮೃತಪಟ್ಟಿದ್ದು, ಕಾರ್ತಿಕ್ ಗಂಭೀರ ಗಾಯಗೊಂಡಿದ್ದಾನೆ. ಮಾಲೂರು (Maluru) ತಾಲೂಕಿನ ಕೊಮ್ಮನಹಳ್ಳಿಯ ಹೋಟೆಲ್ ಬಳಿ ರಾಕೇಶ್ ಹಾಗೂ ಕಾರ್ತಿಕ್ ಮೇಲೆ ಕಣಗಲ ಗ್ರಾಮದ ಗೋವಿಂದು ಮತ್ತು ಆತನ ಗ್ಯಾಂಗ್ ಹಲ್ಲೆ ಮಾಡಿದೆ. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ – ಸಹೋದರ ಸೂರಜ್‌ ರೇವಣ್ಣ ಮೊದಲ ಪ್ರತಿಕ್ರಿಯೆ

ಎರಡು ವರ್ಷದ ಹಿಂದೆ ಕಾರ್ತಿಕ್ ತನಗೆ ಪರಿಚಯ ಇರುವ ಹುಡುಗಿಯನ್ನ ಕಣಗಲ ಗ್ರಾಮದ ಯುವಕರು ಚುಡಾಯಿಸಿದ್ರು ಎಂದು ವಾರ್ನಿಂಗ್ ಕೊಟ್ಟಿದ್ದ. ಸೇಡು ತೀರಿಸಿಕೊಳ್ಳಲು ಯುವಕರ ಗ್ಯಾಂಗ್ 2 ವರ್ಷದಿಂದ ಹೊಂಚು ಹಾಕಿ ಕಾದು ಕುಳಿತಿತ್ತು. ಗುರುವಾರ ರಾತ್ರಿ ಕಾರ್ತಿಕ್ ಹಾಗೂ ರಾಕೇಶ್ ಬಾರ್‌ನಲ್ಲಿದ್ದಾರೆ ಅನ್ನೋ ಮಾಹಿತಿ ತಿಳಿದು ಗೋವಿಂದು ಮತ್ತು ಆತನ ಗ್ಯಾಂಗ್ ಅಲ್ಲಿಗೆ ಬಂದಿದ್ದರು. ಇದನ್ನೂ ಓದಿ: ಹೊಸಪೇಟೆಯ ಧರ್ಮದ ಗುಡ್ಡದಲ್ಲಿ ಚಿರತೆ ಪತ್ತೆ

ಮೊದಲಿಗೆ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿರುವ ಯುವಕರು ಬಳಿಕ ಅಲ್ಲೆ ಪಕ್ಕದಲ್ಲೇ ಇದ್ದ ಡಾಬಾದಲ್ಲಿ ಕಬಾಬ್ ಪಾರ್ಸಲ್ ತೆಗೆದುಕೊಂಡಿದ್ದರು. ಕಾದು ಕುಳಿತಿದ್ದ 5 ಮಂದಿಯ ಗ್ಯಾಂಗ್ ತಲ್ವಾರ್‌ನಿಂದ ರಾಕೇಶ್ ಹಾಗೂ ಕಾರ್ತಿಕ್ ಮೇಲೆ ಮನ ಬಂದಂತೆ ದಾಳಿ ಮಾಡಿದ್ದಾರೆ.

ಪರಿಣಾಮ ರಾಕೇಶ್ ತಲೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಮತ್ತೋರ್ವ ಯುವಕ ಕಾರ್ತಿಕ್‌ನನ್ನು ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಇದನ್ನೂ ಓದಿ: ಟ್ರಾನ್ಸ್‌ಫಾರ್ಮರ್ ದುರಸ್ಥಿ ವೇಳೆ ವಿದ್ಯುತ್ ಶಾಕ್ – 20 ಅಡಿ ಎತ್ತರದಿಂದ ಬಿದ್ದ ಲೈನ್ ಮ್ಯಾನ್

ಇನ್ನೂ ವಿಷಯ ತಿಳಿದು ಕೋಲಾರ ಎಸ್ಪಿ ನಿಖಿಲ್.ಬಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಗೋವಿಂದು ಹಾಗೂ ಸಹಚರರಿಗಾಗಿ ವಿಶೇಷ 2 ತಂಡಗಳನ್ನ ರಚನೆ ಮಾಡಿದ್ದು ಶೋಧ ಕಾರ್ಯ ನಡೆಯುತ್ತಿದೆ. ಇನ್ನೂ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಭೀಕರ ದೃಶ್ಯವು ಡಾಬಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Share This Article