ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ, ನಿರಾಸೆ ಬೇಡ – RCB ತಂಡಕ್ಕೆ ಡಿಕೆಶಿ ಅಭಯ

Public TV
1 Min Read

– ಏನೇ ಆದ್ರೂ ನನ್ನ ಫೇವ್‌ರೇಟ್‌ ಆರ್‌ಸಿಬಿ

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಭಾನುವಾರ ನಡೆದ ಗುಜರಾತ್‌ ಟೈಟಾನ್ಸ್‌ (GT) ಹಾಗೂ ಆರ್‌ಸಿಬಿ (RCB) ನಡುವಿನ ಪಂದ್ಯವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ವೀಕ್ಷಣೆ ಮಾಡಿದರು.

ಇತ್ತೀಚೆಗೆ ರಾಜ್ಯದ ನೂತನ ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ ಡಿಕೆಶಿ, ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ನಡುವೆಯೂ ಪುತ್ರಿ ಐಶ್ವರ್ಯ ಜೊತೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಐಪಿಎಲ್‌ (IPL 2023) ಪಂದ್ಯ ವೀಕ್ಷಿಸಿದರು. ಈ ಸಂತಸವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಅವರು, ಆರ್‌ಸಿಬಿ ತಂಡಕ್ಕೆ ಅಭಯ ನೀಡಿದ್ದಾರೆ. ಇದನ್ನೂ ಓದಿ: RCB ಔಟ್, ಮುಂಬೈಗೆ ಪ್ಲೇ ಆಫ್ ಗಿಫ್ಟ್ – ಪಂದ್ಯ ಸೋತಿದ್ದಕ್ಕೆ ಕಣ್ಣೀರಿಟ್ಟ ಕೊಹ್ಲಿ

ನಮ್ಮ‌‌ ಹುಡುಗರು ಈ ಸಾರಿ ಸೋತಿರಬಹುದು, ಆದರೆ ಅತ್ಯುತ್ತಮ ಆಟದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. ಏನೇ ಆದ್ರು ನನ್ನ ಫೇ‌ವ್‌ರೆಟ್‌ ಆರ್‌ಸಿಬಿ, ಕಪ್ ನಮ್ಮದಾಗುವ ಸಮಯ ಬಂದೇ ಬರುತ್ತೆ. ನಿರಾಸೆ ಬೇಡ, ಆಶಾವಾದವಿರಲಿ ಎಂದು ಧೈರ್ಯತುಂಬಿದ್ದಾರೆ. ಇದನ್ನೂ ಓದಿ: IPL 2023: ಶುಭಮನ್‌ ಗಿಲ್‌ ಶತಕದಾಟ, ಗುಜರಾತ್‌ ಟೈಟಾನ್ಸ್‌ಗೆ ಜಯ – RCB ಮನೆಗೆ, ಮುಂಬೈ ಪ್ಲೇ ಆಫ್‌ಗೆ

ಭಾನುವಾರದ ನಡೆದ ಹೈವೋಲ್ಟೇಜ್‌ ಕದನದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 197 ರನ್‌ ಚಚ್ಚಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಗುಜರಾತ್‌ ಟೈಟಾನ್ಸ್‌ 19.1 ಓವರ್‌ನಲ್ಲಿ 198 ರನ್‌ ಗಳಿಸಿ ಭರ್ಜರಿ ಜಯ ಸಾಧಿಸಿತು.

Share This Article