ಒಂದು ಗಡಿ, ಮೂರು ವಿರೋಧಿಗಳು; ಆಪರೇಷನ್‌ ಸಿಂಧೂರದಲ್ಲಿ ಪಾಕ್‌-ಚೀನಾ-ಟರ್ಕಿ ನಂಟು ಬಹಿರಂಗಪಡಿಸಿದ ಸೇನಾ ಉಪಮುಖ್ಯಸ್ಥ

Public TV
3 Min Read

ನವದೆಹಲಿ: ಭಾರತದ ಉತ್ತರ ಮತ್ತು ಈಶಾನ್ಯ ಗಡಿಗಳಲ್ಲಿ ಚೀನಾದ (China) ಆಕ್ರಮಣಕಾರಿ ಚಟುವಟಿಕೆಗಳು, ಪಾಕಿಸ್ತಾನದಿಂದ (Pakistan) ನಿರಂತರ ಉಗ್ರವಾದದ ಬೆಂಬಲ, ಮತ್ತು ಟರ್ಕಿಯಿಂದ (Turkey) ರಾಜತಾಂತ್ರಿಕ ಹಾಗೂ ಮಿಲಿಟರಿ ಕ್ಷೇತ್ರದಲ್ಲಿ ಸಂಭವನೀಯ ಸಹಕಾರವು ಭಾರತಕ್ಕೆ ಸವಾಲು ಒಡ್ಡುತ್ತಿದೆ. ಒಂದು ಗಡಿಯಲ್ಲಿ ಮೂರು ವಿರೋಧಿಗಳ ಸಂಯೋಜಿತ ಕಾರ್ಯತಂತ್ರವು ಭಾರತದ ಭದ್ರತೆಗೆ ಬೆದರಿಕೆಯಾಗಿದೆ ಎಂದು ಡೆಪ್ಯೂಟಿ ಚೀಫ್ ಆಫ್ ಆರ್ಮಿ ಸ್ಟಾಫ್ ರಾಹುಲ್ ಆರ್‌. ಸಿಂಗ್ (Rahul R Singh) ಕಳವಳ ವ್ಯಕ್ತಪಡಿಸಿದರು.

ಹೊಸ ಯುಗದ ಮಿಲಿಟರಿ ತಂತ್ರಜ್ಞಾನಗಳ ಕುರಿತು FICCI ಆಯೋಜಿಸಿದ್ದ ಉನ್ನತ ಮಟ್ಟದ ರಕ್ಷಣಾ ಕಾರ್ಯಕ್ರಮದಲ್ಲಿ (New Age Military Technologies) ಮಾತನಾಡಿದ ಅವರು, ಪಾಕಿಸ್ತಾನ, ಚೀನಾ ಮತ್ತು ಟರ್ಕಿ ನಡುವಿನ ಬೆಳೆಯುತ್ತಿರುವ ಮಿಲಿಟರಿ ಸಹಯೋಗದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಕಂಡುಬಂದ ಆಧುನಿಕ ಯುದ್ಧ ಸವಾಲುಗಳ ಬಳಿಕ ಭಾರತವು ತನ್ನ ವಾಯು ರಕ್ಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ತುರ್ತು ಅಗತ್ಯವಿದೆ ಎಂದು ಹೇಳಿದರು. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಮಹಿಳಾ ಸಾರಥ್ಯ?

ಆಪರೇಷನ್ ಸಿಂಧೂರ ಸಮಯದಲ್ಲಿ, ಪಾಕಿಸ್ತಾನವು ಚೀನಾದಿಂದ ನೇರ ಗುಪ್ತಚರ ಮಾಹಿತಿ ಪಡೆಯುತ್ತಿತ್ತು ಮತ್ತು ಭಾರತದ ನಿರ್ಣಾಯಕ ಮಿಲಿಟರಿ ನಿಯೋಜನೆಗಳ ಕುರಿತು ನೈಜ-ಸಮಯದ ಮಾಹಿತಿಯನ್ನು ಚೀನಾ ಒದಗಿಸುತ್ತಿತ್ತು. ಡಿಜಿಎಂಒ ಮಟ್ಟದ ಮಾತುಕತೆಗಳು ನಡೆಯುತ್ತಿರುವಾಗ, ನಮ್ಮ ಪ್ರಮುಖ ನೆಲೆಗಳ ಮಾಹಿತಿ‌ ಚೀನಾ ನೀಡಿತ್ತು ಎಂದು ಪಾಕಿಸ್ತಾನವು ಬಹಿರಂಗವಾಗಿ ಹೇಳಿದೆ. ಪಾಕಿಸ್ತಾನ ಮತ್ತು ಚೀನಾ ನೈಜ ಸಮಯದಲ್ಲಿ ಹೇಗೆ ಸಮನ್ವಯ ಸಾಧಿಸುತ್ತಿವೆ ಎಂಬುದಕ್ಕೆ ಈ ಪರಿಸ್ಥಿತಿ ಸ್ಪಷ್ಟ ಉದಾಹರಣೆಯಾಗಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್‌

ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಟರ್ಕಿ ಕೂಡ ಗಮನಾರ್ಹ ಬೆಂಬಲ ನೀಡಿದೆ. ಟರ್ಕಿ ಬೇರಕ್ತಾರ್ ಡ್ರೋನ್‌ಗಳು ಮತ್ತು ಹಲವಾರು ಇತರ ಮಾನವರಹಿತ ವೈಮಾನಿಕ ವ್ಯವಸ್ಥೆಗಳನ್ನು ಮತ್ತು ನೆಲದ ಮೇಲೆ ತರಬೇತಿ ಪಡೆದ ಸೈನಿಕರನ್ನು ಪೂರೈಸಿದೆ. ವಿರೋಧಿಗಳು ಮುಂದುವರಿದ ಡ್ರೋನ್ ತಂತ್ರಜ್ಞಾನದ ಬಳಕೆಯು ಆಧುನಿಕ ಯುದ್ಧಭೂಮಿಗಳಿಗೆ ಸಂಕೀರ್ಣತೆ ಹೆಚ್ಚಿಸಿದೆ, ಇದು ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಮತ್ತಷ್ಟು ಒತ್ತಿಹೇಳುತ್ತದೆ ಎಂದರು. ಇದನ್ನೂ ಓದಿ: ಶಾಹಿ ಈದ್ಗಾ ಮಸೀದಿಯನ್ನ ʻವಿವಾದಿತ ರಚನೆʼ ಅಂತ ಉಲ್ಲೇಖಿಸುವಂತೆ ಮನವಿ – ಹಿಂದೂ ಪರ ವಕೀಲರ ಅರ್ಜಿ ವಜಾ

ಭಾರತವು ಒಂದೇ ಗಡಿಯಲ್ಲಿ ಮೂರು ವಿರೋಧಿಗಳೊಂದಿಗೆ ವ್ಯವಹರಿಸುತ್ತಿದೆ, ಪಾಕಿಸ್ತಾನವು ಮುಂಚೂಣಿಯಲ್ಲಿತ್ತು, ಚೀನಾ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿತ್ತು ಮತ್ತು ಟರ್ಕಿಯ ಒಳಗೊಳ್ಳುವಿಕೆ ಸ್ಪಷ್ಟವಾಗಿತ್ತು. ಪಾಕಿಸ್ತಾನದ ಮಿಲಿಟರಿ ಹಾರ್ಡ್‌ವೇರ್‌ನಲ್ಲಿ ಶೇ. 81 ರಷ್ಟು ಚೀನಾದಿಂದಲೇ ಬರುತ್ತಿದೆ. ಪಾಕಿಸ್ತಾನವನ್ನು ಚೀನಾದ ರಕ್ಷಣಾ ತಂತ್ರಜ್ಞಾನದ ಪರೀಕ್ಷಾ ಮೈದಾನವನ್ನಾಗಿ ಪರಿವರ್ತಿಸಿದೆ. ಚೀನಾ ತನ್ನ ಶಸ್ತ್ರಾಸ್ತ್ರಗಳನ್ನು ಇತರ ಶಸ್ತ್ರಾಸ್ತ್ರಗಳ ವಿರುದ್ಧ ಪರೀಕ್ಷಿಸಲು ವೇದಿಕೆ ಮಾಡಿಕೊಂಡಿದೆ.

ಕಾರ್ಯಾಚರಣೆಯ ಸಮಯದಲ್ಲಿ ನಮ್ಮ ವಾಯು ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿದೆ. ಆದರೆ ಮುಂದಿನ ಬಾರಿ ಭಾರತದ ಜನಸಂಖ್ಯಾ ಕೇಂದ್ರಗಳನ್ನು ಗುರಿಯಾಗಿಸಬಹುದು. ಈ ಬಾರಿ ನಮ್ಮ ಜನಸಂಖ್ಯಾ ಕೇಂದ್ರಗಳನ್ನು ಸಂಪೂರ್ಣವಾಗಿ ಗಮನಿಸಲಾಗಿಲ್ಲ, ಆದರೆ ಮುಂದಿನ ಬಾರಿ, ನಾವು ಅದಕ್ಕೆ ಸಿದ್ಧರಾಗಿರಬೇಕು. ಡ್ರೋನ್‌ಗಳ ಹೆಚ್ಚುತ್ತಿರುವ ಬೆದರಿಕೆ ಮತ್ತು ಆಧುನಿಕ ಯುದ್ಧ ತಂತ್ರಗಳನ್ನು ಎದುರಿಸಲು ಬಲಿಷ್ಠ, ತಾಂತ್ರಿಕವಾಗಿ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಕರೆ ನೀಡಿದರು. ಇದನ್ನೂ ಓದಿ: ದೆಹಲಿ ಸರ್ಕಾರದಿಂದ ಯೂಟರ್ನ್ – ಅವಧಿ ಮೀರಿದ ವಾಹನಗಳಿಗೆ ಹೇರಿದ್ದ ಇಂಧನ ನಿಷೇಧ ಆದೇಶ ವಾಪಸ್

Share This Article