ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡಿಗೆ ರಾಮನಂತೆ ಬಿಲ್ಲು ಹಿಡಿದ ಕೊಹ್ಲಿ ವೀಡಿಯೋ ವೈರಲ್

Public TV
1 Min Read

ಕೇಪ್‍ಟೌನ್: ದಕ್ಷಿಣ ಆಫ್ರಿಕಾ (South Africa) ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಮೈದಾನದಲ್ಲಿ ಶ್ರೀರಾಮನ ಮೇಲೆ ಭಕ್ತಿ ಪ್ರದರ್ಶಿಸಿದ್ದಾರೆ. ಪಂದ್ಯದ ವೇಳೆ ರಾಮ್ ಸಿಯಾ ರಾಮ್ ಹಾಡನ್ನು ಹಾಕಿದಾಗ ಕೈಮುಗಿದು, ಬಿಲ್ಲು ಬಾಣ ಹಿಡಿದ ರಾಮನಂತೆ ಪೋಸ್ ಕೊಟ್ಟು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಫೋಟೋ ಹಾಗೂ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಗೆ ತತ್ತರಿಸಿತು. 47 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ, ಕೇಶವ್ ಮಹಾರಾಜ್ ಕ್ರೀಸ್‍ಗಿಳಿಯುವ ಸಂದರ್ಭದಲ್ಲಿ ಕೇಳಿ ಬಂದ ಹಾಡಿಗೆ ವಿರಾಟ್ ಕೊಹ್ಲಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ಸಿರಾಜ್ ಬೌಲಿಂಗ್ ಅಬ್ಬರಕ್ಕೆ ತತ್ತರಿಸಿದ ದಕ್ಷಿಣ ಆಫ್ರಿಕಾ ಪಡೆ, 55ಕ್ಕೆ ಅಲೌಟ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಮೊಹಮದ್ ಸಿರಾಜ್ ಅಬ್ಬರದ ಬೌಲಿಂಗ್ ದಾಳಿಗೆ 55 ರನ್‍ಗೆ ಆಲೌಟ್ ಆಯಿತು.

153 ರನ್‍ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ, ಆ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಸರ್ವಪತನ ಕಂಡಿತು. 146 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ, ಒಟ್ಟಾರೆ 2522 ಟೆಸ್ಟ್‌ಗಳಲ್ಲಿ ತಂಡವೊಂದು ಒಂದು ರನ್ ಗಳಿಸದೇ 6 ವಿಕೆಟ್ ಕಳೆದುಕೊಂಡಿದ್ದು ಇದೇ ಮೊದಲಾಗಿದೆ. ಇದನ್ನೂ ಓದಿ: ಇದು ಇಡೀ ಭಾರತದ ಶ್ರೇಷ್ಠ ಕ್ಷಣ – ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಆಹ್ವಾನ ಪಡೆದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ

Share This Article