ಪಾಟ್ನಾ ಆಸ್ಪತ್ರೆಯಲ್ಲಿ ಐವರ ಗ್ಯಾಂಗ್‌ನಿಂದ ಫೈರಿಂಗ್ – ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿ ಸಾವು

Public TV
1 Min Read

ಪಾಟ್ನಾ: ಐವರ ಗ್ಯಾಂಗೊಂದು ಗನ್ ಹಿಡಿದು ಆಸ್ಪತ್ರೆಯೊಳಗೆ ನುಗ್ಗಿ ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಲೆಗೈದಿರುವ ಘಟನೆ ಪಾಟ್ನಾದ (Patna) ಪರಾಸ್ ಆಸ್ಪತ್ರೆಯಲ್ಲಿ ನಡೆದಿದೆ.

ಪೆರೋಲ್ ಮೇಲೆ ಹೊರಗಿದ್ದ ಬಕ್ಸಾರ್ ಜಿಲ್ಲೆಯ ನಿವಾಸಿ ಚಂದನ್ ಮಿಶ್ರಾ ಮೃತ ಆರೋಪಿ. ದಾಳಿಕೋರರನ್ನು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಬಿಲ್ಡರ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ಐವರು ದುಷ್ಕರ್ಮಿಗಳು ಕೃತ್ಯ ಎಸಗಿದ್ದು, ಘಟನೆಯ ದೃಶ್ಯಗಳು ಆಸ್ಪತ್ರೆಯಲ್ಲಿದ್ದ ಸಿಸಿಟವಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಬರಬೇಡ ಅಂದಿದ್ದೇ ಬಿಎಸ್‍ವೈ: ಯತ್ನಾಳ್ ಬಾಂಬ್

ವಿಡಿಯೋದಲ್ಲಿ ಐವರ ಗ್ಯಾಂಗ್ ಗನ್ ಹಿಡಿದು ಆಸ್ಪತ್ರೆಯ ಒಳನುಗ್ಗಿದ್ದಾರೆ. ವಾರ್ಡ್ವೊಂದಕ್ಕೆ ತೆರಳಿ, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊಲೆ ಆರೋಪಿಯ ಮೇಲೆ ಗುಂಡು ಹಾರಿಸಿ, ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಗಾಯಗೊಂಡಿದ್ದ ಚಂದನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿದ್ದ ಇತರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಮೃತ ಚಂದನ್ ಕೊಲೆ ಆರೋಪದಲ್ಲಿ ಜೈಲುಪಾಲಾಗಿದ್ದ. ಆದರೆ ಆರೋಗ್ಯ ಸಮಸ್ಯೆಯಿರುವ ಕಾರಣ ಚಿಕಿತ್ಸೆ ಪಡೆಯಲು ಪೆರೋಲ್ ಮೇಲೆ ಹೊರಬಂದಿದ್ದ. ಇದೇ ವೇಳೆ ಅವನ ವಿರೋಧಿ ಗ್ಯಾಂಗ್‌ವೊಂದು ಸೇಡು ತೀರಿಸಿಕೊಳ್ಳಲು ದಾಳಿ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೂ ದಾಳಿಕೋರರು ಈ ಮುಂಚೆ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದರು, ಸದ್ಯ ಅವರ ಫೋಟೋ ನಮ್ಮ ಬಳಿಯಿದ್ದು, ಪತ್ತೆಗಾಗಿ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ – ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ

ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿದ ಕಾಡಾನೆಗಳ ಉಪಟಳ – ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ

ಇದನ್ನೂ ಓದಿ: ಮಂಗಳೂರು| ಕಿರಿಯ ವಯಸ್ಸಿನಲ್ಲೇ ರೋಲ್ಸ್‌ ರಾಯ್ಸ್‌ನಲ್ಲಿ ಉದ್ಯೋಗ; ವರ್ಷಕ್ಕೆ 72 ಲಕ್ಷ ಸಂಬಳ- ಯುವತಿಗೆ ಸನ್ಮಾನ

Share This Article