ಪ್ರತಿ ಬಣ್ಣದಲ್ಲೂ ಇದೆ ಹರುಷ – ಹೋಳಿ ಹಬ್ಬಕ್ಕೆ ಶುಭಕೋರಿದ ಪ್ರಧಾನಿ

Public TV
1 Min Read

ನವದೆಹಲಿ: ಕೋವಿಡ್ ಇಳಿಮುಖವಾದ ನಂತರ ಇಡೀ ದೇಶವು ಸಂಭ್ರಮದಿಂದ ಹೋಳಿಹಬ್ಬ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ರಾಹುಲ್‍ಗಾಂಧಿ ಸೇರಿದಂತೆ ಪ್ರಮುಖರು ಹಬ್ಬಕ್ಕೆ ಶುಭ ಕೋರಿದ್ದಾರೆ.

`ನಿಮ್ಮೆಲ್ಲರಿಗೂ ಪರಸ್ಪರ ಪ್ರೀತಿ ವಾತ್ಸಲ್ಯ ಹಾಗೂ ಸಹೋದರತ್ವ ಸಂಕೇತವಾಗಿರುವ ಹೋಳಿಹಬ್ಬದ ಶುಭಾಶಯಗಳು. ಈ ಬಣ್ಣದ ಹಬ್ಬದಲ್ಲಿ ಪ್ರತಿಯೊಂದು ಬಣ್ಣವೂ ನಿಮ್ಮ ಜೀವನದಲ್ಲಿ ಸಂತೋಷ, ಹರುಷ ತರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು

ರಕ್ಷಣಾ ಸಚಿವ ರಾಜನಾಥ್ ಸಿಂಗ್, `ಇದು ಸಕಾರಾತ್ಮಕತೆ, ಚೈತನ್ಯ, ಸಂತೋಷ ಹಾಗೂ ಸಾಮರಸ್ಯಕ್ಕೆ ಸಂಬಂಧಿಸಿದ ಬಣ್ಣಗಳ ಹಬ್ಬವಾಗಿದೆ. ಎಲ್ಲರಿಗೂ ಹಬ್ಬದ ಶುಭಾಶಯಗಳು’ ಎಂದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಸಹ ಹೋಳಿ ಹಬ್ಬದ ಸಂದೇಶ ಕೋರಿದ್ದು, `ಹೃದಯಗಳನ್ನು ಬೆಸೆಯುವ ಈ ಹೋಳಿಹಬ್ಬ ಪ್ರತಿಯೊಬ್ಬರಿಗೂ ಹರುಷ ತರಲಿ. ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಇಳಿಕೆಯಾಗುತ್ತಿರುವುದು ಹರ್ಷದಾಯಕ. ಆದಾಗ್ಯೂ ಹಲವಾರು ದೇಶಗಳಲ್ಲಿ ಮತ್ತೆ ಅಲೆ ಮುಂದುವರಿಯುತ್ತಿದ್ದು ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚಿಸಲಾಗುತ್ತಿದೆ’ ಎಂದೂ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವ್ಯಕ್ತಿ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು

On Holi, PM Scott Morrison Thanks Indian Australians With Special Message

ಆಸ್ಟ್ರೇಲಿಯಾ ಪ್ರಧಾನಿಯ ಶುಭಸಂದೇಶ
ಹೋಳಿಹಬ್ಬದ ಪ್ರಯುಕ್ತ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರಿಗೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರೂ ಶುಭ ಹಾರೈಸಿದ್ದಾರೆ. ಈ ಕುರಿತು ಅಧೀಕೃತ ಪ್ರಕಟಣೆ ಹೊರಡಿಸಿರುವ ಅವರು, `ನಾನು ಭಾರತೀಯ ಆಸ್ಟ್ರೇಲಿಯನ್ ಸಮುದಾಯಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮ ಸ್ವಂತ ಕುಟುಂಬಗಳಿಗೆ ಮಾತ್ರವಲ್ಲದೆ ಎಲ್ಲ ಆಸ್ಟ್ರೇಲಿಯನ್ನರಿಗೂ ನೀವು ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ಅಲ್ಲದೆ, ಕೋವಿಡ್ ಕಾರಣದಿಂದ ಅಂತರ ಮೂಡಿದ್ದ ಸಮುದಾಯಗಳ ನಡುವೆ ಇಂತಹ ಆಚರಣೆಗಳು ಸ್ನೇಹ ಹಾಗೂ ಏಕತೆಯ ಉತ್ಸಾಹದಲ್ಲಿ ನಮ್ಮನ್ನು ಒಟ್ಟಿಗೇ ಸೇರಿಸುತ್ತವೆ, ಭವಿಷ್ಯದ ಭರವಸೆಗಳನ್ನೂ ಪ್ರೇರೇಪಿಸುತ್ತದೆ’ ಎಂದು ಸಂದೇಶ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *