ಕೋಲ್ಕತ್ತಾ: ಕಾನೂನು ವಿದ್ಯಾರ್ಥಿನಿಯ (Law Student) ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿದ್ಯಾರ್ಥಿನಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳು ಸಂತ್ರಸ್ತೆಯನ್ನು ಕಾಲೇಜಿನೊಳಗೆ ಎಳೆದೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ. ವಿದ್ಯಾರ್ಥಿನಿಯನ್ನು ಇಬ್ಬರು ಆರೋಪಿಗಳು ಕಾಲೇಜು ಗೇಟ್‌ನಿಂದ ಕಾಲೇಜು ಕ್ಯಾಂಪಸ್‌ನೊಳಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ – ಹೆಜ್ಜೆ ಹೆಜ್ಜೆಗೂ ಪೊಲೀಸರ ನಿಗಾ
ಪ್ರಮುಖ ಆರೋಪಿ ಮನೋಜಿತ್ ಮಿಶ್ರಾ ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾವಲುಗಾರರ ಕೋಣೆಗೆ ಕರೆದೊಯ್ಯಲು ಇತರ ಇಬ್ಬರು ಆರೋಪಿಗಳಿಗೆ ಹೇಳಿದ್ದಾನೆ. ಅದರಂತೆ ಇಬ್ಬರು ಸಂತ್ರಸ್ತೆಯನ್ನು ಎಳೆದೊಯ್ದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಸಂತ್ರಸ್ತೆಯ ಆರೋಪಗಳನ್ನು ದೃಢಪಡಿಸುತ್ತವೆ. ಮೂವರು ಆರೋಪಿಗಳು, ಭದ್ರತಾ ಸಿಬ್ಬಂದಿ ಮತ್ತು ಸಂತ್ರಸ್ತೆಯನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಸದ್ಯ ಪಶ್ಚಿಮ ಬಂಗಾಳ ಪೊಲೀಸರು ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಚಾರ್‌ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವು
ಕಸ್ಬಾ ಪ್ರದೇಶದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯ ವಿವಾಹ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ಕೋಲ್ಕತ್ತಾ ಕಾನೂನು ಕಾಲೇಜಿನೊಳಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಪೊಲೀಸರ ಮುಂದೆ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ. ಇದನ್ನೂ ಓದಿ: ಕಸದ ಲಾರಿಯಲ್ಲಿ ಶವ ಪತ್ತೆ | ದಿನಾ ಕುಡಿದು ಬಂದು ರಂಪಾಟ ಮಾಡಿದ್ದಕ್ಕೆ ಮಹಿಳೆಯ ಕೊಲೆ!