ಸಿಕ್ಸರ್‌ ಬಾರಿಸಿದ 7 ಸೆಕೆಂಡುಗಳಲ್ಲಿ ಹೃದಯಾಘಾತ – ಮೈದಾನದಲ್ಲೇ ಜೀವಬಿಟ್ಟ ಕ್ರಿಕೆಟಿಗ

Public TV
1 Min Read

ಮುಂಬೈ: ಆಟದ ವೇಳೆ ಕ್ರೀಸ್‌ನಲ್ಲಿ ಮುನ್ನುಗ್ಗಿ ಸಿಕ್ಸರ್‌ ಬಾರಿಸಿದ 7 ಸೆಕೆಂಡುಗಳಲ್ಲೇ ಹೃದಯಾಘಾತ (Heart Attack) ಸಂಭವಿಸಿ ಕ್ರಿಕೆಟಿಗನೊಬ್ಬ (Cricketer) ಮೈದಾನದಲ್ಲೇ ಪ್ರಾಣಬಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ (Maharashtra) ಥಾಣೆಯ ಮೀರಾ ರೋಡ್‌ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕ್ರಿಕೆಟಿಗ ಪ್ರಾಣಬಿಟ್ಟಿದ್ದಾರೆ. ಆತ ಯಾರು – ಏನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್

ಪಿಂಕ್‌ ಬಣ್ಣದ ಜೆರ್ಸಿ ಧರಿಸಿದ ಕ್ರಿಕೆಟಿಗ ನೆಟ್‌ ಕ್ರಿಕೆಟ್‌ ಆಡುತ್ತಿದ್ದ ವೇಳೆ ಭರ್ಜರಿ ಸಿಕ್ಸರ್‌ ಬಾರಿಸಿದ್ದಾನೆ. ಬಳಿಕ ಮುಂದಿನ ಎಸೆತ ಎದುರಿಸಲು ಕ್ರೀಸ್‌ನಲ್ಲಿ ನಿಂತ 7 ಸೆಕೆಂಡುಗಳಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಸಹ ಆಟಗಾರರು ಕೂಡಲೇ ಸಹಾಯಕ್ಕೆ ಧಾವಿಸಿದ್ದಾರೆ, ಅಷ್ಟರಲ್ಲಿ ಆಟಗಾರ ಮೃತಪಟ್ಟಿರುವುದು ಗೊತ್ತಾಗಿದೆ. ಇದನ್ನೂ ಓದಿ: 64.2 ಕೋಟಿ ಜನರಿಂದ ಮತದಾನ – ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿಶ್ವದಾಖಲೆ

ಹೃದಯಾಘಾತದ ಮುನ್ಸೂಚನೆ
* ಎದೆ ನೋವು, ಒತ್ತಡ ಹಾಗೂ ಎದೆಯ ಬಿಗಿತ, ಎದೆ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು
* ತೋಳಿನ ಭಾಗದಲ್ಲಿ ನೋವು
* ಗಂಟಲು ಮತ್ತು ದವಡೆಗಳಲ್ಲಿ ನೋವು
* ಹೊಟ್ಟೆ ನೋವು, ಅತಿಯಾದ ಬೆವರುವಿಕೆ
* ಅಜೀರ್ಣ, ವಿಪರೀತ ಸುಸ್ತು ಇವೆಲ್ಲವೂ ಹೃದಯಾಘಾತಕ್ಕೆ ಕಾರಣ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

Share This Article