ಮ್ಯಾನೇಜರ್ ನಂಬರ್ ಕೇಳಿದ್ದೆ ತಪ್ಪಾ? – ಬಟ್ಟೆ ಚಿಂದಿಯಾಗುವಂತೆ ವ್ಯಕ್ತಿಗೆ ಹೊಡೆದ್ರು ಮಹಿಳೆಯರು

By
2 Min Read

ಭೋಪಾಲ್: ಮಹಿಳೆಯರ ಗುಂಪೊಂದು ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಬಟ್ಟೆ ಹರಿದು ಹೋಗುವಂತೆ ನಿರ್ದಯವಾಗಿ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಾನುವಾರ ರಾಯಪುರದ ಸ್ವಾಮಿ ವಿವೇಕಾನಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Raipur’s Swami Vivekananda International Airport) ವ್ಯಕ್ತಿಯೊಬ್ಬರು ಈ ವೀಡಿಯೋವನ್ನು ಸೆರೆಹಿಡಿದಿದ್ದು, ವೀಡಿಯೋದಲ್ಲಿ ರೊಚ್ಚಿಗೆದ್ದ ಮಹಿಳೆಯರು ಬೆಲ್ಟ್‌ನಿಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಮತ್ತು ಹಣದ ವಿಚಾರವಾಗಿ ಪದೇ, ಪದೇ ಕಪಾಳಮೋಕ್ಷ ಮಾಡಿ, ಗುದ್ದುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ವ್ಯಕ್ತಿ ಧರಿಡಿದ್ದ ಶರ್ಟ್ ಕಿತ್ತುಹೋಗುವಂತೆ ಹೊಡೆದಿದ್ದಾರೆ.

ಈ ಘಟನೆ ಸಂಬಂಧ ಎರಡೂ ಕಡೆಯವರು ರಾಯ್‍ಪುರ ನಗರದ ಮನ ಪೊಲೀಸ್ ಠಾಣೆಯಲ್ಲಿ (Mana police Station in Raipur city) ಪ್ರಕರಣ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಹುಲ್ ಟ್ರಾವೆಲ್ಸ್ (Rahul Travels) ಎಂಬ ಟ್ರಾವೆಲ್ ಕಂಪನಿಯ ಆಟೋ ಟ್ಯಾಕ್ಸಿ ಚಾಲಕ (Auto Taxi Driver) ದಿನೇಶ್ (Dinesh) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು

ತಾನು ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಈ ವರ್ಷ ಮೇ ಮತ್ತು ಜೂನ್ ತಿಂಗಳ ಸಂಬಳವನ್ನೇ ಪಡೆದಿರಲಿಲ್ಲ. ಹೀಗಾಗಿ ಬಾಕಿ ಹಣವನ್ನು ವಸೂಲಿ ಮಾಡಲು ಕಚೇರಿಗೆ ಬಂದಾಗ, ಮಹಿಳಾ ಉದ್ಯೋಗಿಗಳು ತನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು ಮತ್ತು ಜಗಳವಾಡಿದರು. ಮ್ಯಾನೇಜರ್‌ನ ನಂಬರ್ ಕೇಳಿದಾಗ, ಮಹಿಳೆಯರ ಗುಂಪು ತನ್ನನ್ನು ಥಳಿಸಿ ನಿಂದಿಸಲು ಪ್ರಾರಂಭಿಸಿದರು ಎಂದು ದಿನೇಶ್  ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಜೊತೆಗೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನಿಗೆ ಜಾಕ್‌ಪಟ್‌ – ಓಣಂ ಬಂಪರ್‌ ಲಾಟರಿಯಲ್ಲಿ 25 ಕೋಟಿ ಗೆದ್ದ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *