7ನೇ ಮದುವೆ ವಾರ್ಷಿಕೋತ್ಸವಕ್ಕೆ ಪತಿ ಡೇನಿಯಲ್‍ಗೆ ಸಂದೇಶ ರವಾನಿಸಿದ ಸನ್ನಿ ಲಿಯೋನ್!

Public TV
2 Min Read

ಮುಂಬೈ: ಹೆಸರಲ್ಲೆ ಮಾದಕತೆ ತುಂಬಿಕೊಂಡಿರುವ ನಟಿ ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಮದುವೆ ವಾರ್ಷಿಕೋತ್ಸವದಲ್ಲಿರುವ ಸನ್ನಿ ಪತಿ ಡೇನಿಯಲ್ ವೆಬರ್ ಗೆ ಭಾವನಾತ್ಮಕವಾಗಿ ಟ್ವಿಟ್ಟರ್ ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ.

ಏನದು ಸಂದೇಶ?: ನಾವಿಬ್ಬರು ದೇವರ ಮುಂದೆ ನಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡು ಇಂದಿಗೆ 7 ವರ್ಷಗಳು ಕಳೆದಿವೆ. ಇಬ್ಬರಲ್ಲಿಯೂ ಅಂದಿನ ಪ್ರೀತಿ ಇಂದಿಗೂ ಹಾಗೆ ಇದೆ. ಅಂದು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೇನೋ, ಇಂದು ಆ ಪ್ರೀತಿ ಇನ್ನು ಹೆಚ್ಚಾಗಿದೆ. ಹೀಗೆ ಇಬ್ಬರು ಸಂತೋಷದಿಂದ ಜೀವನದ ಪಯಣ ಮುಂದುವರೆಸೋಣ. ಲವ್ ಯೂ ಸೋ ಮಚ್. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಡೇನಿಯಲ್ ಎಂದು ಬರೆದುಕೊಂಡಿದ್ದಾರೆ.

ಪತ್ನಿ ಸನ್ನಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡೇನಿಯಲ್, ಇಂದಿಗೆ ನಾವಿಬ್ಬರು ನಮ್ಮ ಪಯಣ ಆರಂಭಿಸಿ 7 ವರ್ಷಗಳು ಕಳೆದಿವೆ. ನಾನು ಫಸ್ಟ್ ಡೇ ನಿನ್ನ ಭೇಟಿಯಾದ ದಿನದಂತೆ ಎಲ್ಲ ದಿನಗಳು ಹಾಗಿರಲಿ ಅಂತಾ ಇಷ್ಟಪಡುತ್ತೇನೆ ಅಂತಾ ಬರೆದು ಸನ್ನಿಯನ್ನು ಎತ್ತಿಕೊಂಡಿರುವ ಫೋಟೋ ಹಾಕಿಕೊಂಡಿದ್ದಾರೆ.

ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ 2017ರಲ್ಲಿ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದರು. ಈ ವರ್ಷ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ವೆಬರ್ ಮುದ್ದಾದ ಮಕ್ಕಳಿಗೆ ಸನ್ನಿ ತಾಯಿಯಾಗಿದ್ದಾರೆ. ಇದು ನಿಜಕ್ಕೂ ದೇವರ ಇಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನ ಹೊಂದುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಜೀವನದಲ್ಲಿ ಈ ಮೂರು ಪವಾಡಗಳನ್ನ ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಹೇಳಿದ್ದರು.

ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್‍ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋದೆವು. ಬಾಡಿಗೆ ತಾಯಿಯ ಮೂಲಕ ಆಶೆರ್ ಮತ್ತು ನೋವಾ ಜನಿಸಿದ್ದಾರೆ. ಬಾಡಿಗೆ ತಾಯ್ತನದ ಬಗ್ಗೆ ನಾವು ಹಲವು ವರ್ಷಗಳ ಹಿಂದೆಯೇ ಚಿಂತಿಸಿದ್ದೆವು. ಈಗ ಅದು ಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.

ಏಳನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಸನ್ನಿ ಮತ್ತು ವೆಬರ್ ದಂಪತಿಗೆ ಬಾಲಿವುಡ್ ಗಣ್ಯರೆಲ್ಲ ಶುಭಕೋರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *