Most Eligible Bachelor ಸಲ್ಮಾನ್ ಖಾನ್ ಈಗ ಸೀನಿಯರ್ ಸಿಟಿಜನ್

1 Min Read

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಇಂದು ತಮ್ಮ 60ನೇ ವರ್ಷದ ಹುಟ್ಟುಹಬ್ಬದ (Birth Day) ಸಂಭ್ರಮದಲ್ಲಿದ್ದಾರೆ. ಈ ಮೂಲಕ ಹಿರಿಯ ನಾಗರಿಕರ ಪಟ್ಟಿಗೆ ಸಲ್ಮಾನ್ ಸೇರ್ಪಡೆಯಾಗಿದ್ದಾರೆ.

ಸುಮಾರು ಮೂರೂವರೆ ದಶಕದಿಂದ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಸುತ್ತಿರುವ ಸಲ್ಮಾನ್ ಖಾನ್ ನೇರ ನಿಷ್ಠುರ ಮಾತು ವಿವಾದಗಳಿಂದಾಗಿ ಬ್ಯಾಡ್‌ಬಾಯ್ ಎಂದೇ ಫೇಮಸ್‌ ಆಗಿದ್ದಾರೆ.

ಇದೀಗ ಜೀವನದ ಇನ್ನೊಂದು ಹಂತದ ಪ್ರಯಾಣಕ್ಕೆ ಸಲ್ಮಾನ್ ಸಿದ್ಧರಾಗಬೇಕಿದೆ. ಈಗಲೂ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿರುವ ಸಲ್ಮಾನ್ ಖಾನ್ ಇನ್ನೂ ಸಿಂಗಲ್. ಹೀಗಾಗಿ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಎಂದು ಕರೆಯಲ್ಪಡುವ ಸಲ್ಮಾನ್ ಖಾನ್ ಇನ್ಮುಂದೆ ಸೀನಿಯರ್ ಸಿಟಿಜನ್ ಅನ್ನೋದೇ ವಿಶೇಷ. ಇದನ್ನೂ ಓದಿ: ಕರಿಕಾಡ ಚಿತ್ರದ ಕಬ್ಬಿನ ಜಲ್ಲೆ ಸಾಂಗ್ ಎಲ್ಲೆಡೆ ಬಾರಿ ಸದ್ದು

ತಮ್ಮ ಹುಟ್ಟುಹಬ್ಬವನ್ನ ಮುಂಬೈನಲ್ಲಿ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಸರಳವಾಗಿ ಸಲ್ಲು ಆಚರಿಸಿಕೊಂಡಿದ್ದಾರೆ. ಸಲ್ಮಾನ್‌ಗೆ ಬೆದರಿಕೆ ಇರುವ ಹಿನ್ನೆಲೆ ಬಹಿರಂಗವಾಗಿ ಹೆಚ್ಚು ಓಡಾಟ ನಡೆಸುತ್ತಿಲ್ಲ. ಸಲ್ಮಾನ್ ಖಾನ್‌ಗೆ 60 ವರ್ಷ ಆಗಿದೆ ಎಂಬುದನ್ನ ನಂಬಲು ಅಸಾಧ್ಯ ಎಂದು ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.
Share This Article