Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: 31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ
Latest

31ನೇ ಬಾರಿ ಹಿಡಿಯಿತು ಅದೃಷ್ಟ -ಬುಲೆಟ್ ರೈಲು ಯೋಜನೆಗೆ ಲೋಗೋ ರೂಪಿಸಿದ ವಿದ್ಯಾರ್ಥಿಯ ಸಾಧನೆಯ ಕತೆ

Public TV
Last updated: October 31, 2017 1:53 pm
By Public TV
Share
3 Min Read

ನವದೆಹಲಿ: ಸರ್ಕಾರ ಆಯೋಜಿಸುವ ಲೋಗೋ ಸ್ಪರ್ಧೆಯ ಅಂತಿಮ ಸುತ್ತಿಗೆ ಲೋಗೋ ಆಯ್ಕೆಯಾದರೂ ಪ್ರಶಸ್ತಿ ಗಳಿಸುವಲ್ಲಿ ವಿಫಲ. ಒಂದಲ್ಲ ಎರಡಲ್ಲ ಒಟ್ಟು 30 ಬಾರಿ ಪ್ರಶಸ್ತಿಯ ಸನಿಹ ಬಂದಿದ್ದರೂ ಕೊನೆಗೆ ನಿರಾಸೆ. ಲೋಗೋ ಆಯ್ಕೆಯಾಗದೇ ಇದ್ದರೂ ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹ ಮಾತ್ರ ಕುಂದಲಿಲ್ಲ. ಆದರೆ 31ನೇ ಬಾರಿ ಅದೃಷ್ಟ ಕೈ ಹಿಡಿದಿದ್ದು ಲೋಗೋ ಆಯ್ಕೆಯಾಗಿದೆ.

ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬುಲೆಟ್ ರೈಲು ಯೋಜನೆಯ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿ ಜಯಗಳಿಸಿದ ಅಹಮದಾಬಾದಿನ ವಿದ್ಯಾರ್ಥಿಯ ಸಾಧನೆಯ ಕತೆ.

27 ವರ್ಷದ ಚಕ್ರಧರ್ ಅವರು ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನಲ್ಲಿ ಎರಡನೇ ವರ್ಷದ ಪದವಿ ಓದುತ್ತಿದ್ದು, ತಮ್ಮ 31ನೇ ಪ್ರಯತ್ನದಲ್ಲಿ ಜಯಗಳಿಸಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕೇಂದ್ರ ಸರ್ಕಾರ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಜನರಿಂದ ಲೋಗೋ ಗಳನ್ನು ಆಹ್ವಾನಿಸಿ MyGov.in ಪೋರ್ಟಲ್ ಗೆ ಅಪ್ಲೋಡ್ ಮಾಡುವಂತೆ ಸೂಚಿಸಿತ್ತು. ಅದರಂತೆ ಚಕ್ರಧರ್ ಅವರು ಲೋಗೋ ವನ್ನು ವಿನ್ಯಾಸ ಮಾಡಿ ಅಪ್ಲೋಡ್ ಮಾಡಿದ್ದರು. ಬಂದಿರುವ ಲೋಗೋಗಳಲ್ಲಿ ಅಂತಿಮ ಸುತ್ತಿಗೆ 100ಕ್ಕೂ ಅಧಿಕ ಲೋಗೋಗಳನ್ನು ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಪ್ರಸಿದ್ಧ ಚಿತ್ರಗಾರ ಸತೀಶ್ ಗುಜ್ರಾಲ್ ಅವರ ಸಮಿತಿ ಚಕ್ರಧರ್ ಅವರು ಬಿಡಿಸಿದ ಲೋಗೋವನ್ನು ಆಯ್ಕೆ ಮಾಡಿದೆ.

ಲೋಗೋದ ವಿಶೇಷತೆ ಏನು?
ರೈಲು ಸಂಚಾರಿ ಮ್ಯಾಪ್ ನಂತೆ ಲೋಗೋ ಇದ್ದು, ಅದರಲ್ಲಿರುವ ಸಣ್ಣ ಚುಕ್ಕೆಗಳು ಮಾರ್ಗ ಮಧ್ಯದ ರೈಲು ನಿಲ್ದಾಣಗಳನ್ನು ಪ್ರತಿನಿಧಿಸಿದರೆ, ಮುಖ್ಯವಾಗಿ ಮಧ್ಯಭಾಗದಲ್ಲಿರುವ ಚಿರತೆ ವೇಗ, ವಿಶ್ವಾರ್ಹತೆ ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಚಕ್ರಧರ್ ಹೇಳಿದ್ದಾರೆ.

More Read

ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ಸಾವು – ಪತ್ನಿ ಶವದ ಮುಂದೆ 2 ದಿನ ಕಳೆದಿದ್ದ ಪತಿ
ಬೆಂಗಳೂರು | ಗರ್ಭಿಣಿ ಅನುಮಾನಾಸ್ಪದ ಸಾವು – ಪತ್ನಿ ಶವದ ಮುಂದೆ 2 ದಿನ ಕಳೆದಿದ್ದ ಪತಿ
`ಡಿ’ ಗ್ಯಾಂಗ್‍ಗೆ ಢವಢವ – ದರ್ಶನ್ ಸೇರಿ 7 ಮಂದಿ ಜಾಮೀನು ಭವಿಷ್ಯ ಇಂದು?
`ಡಿ’ ಗ್ಯಾಂಗ್‍ಗೆ ಢವಢವ – ದರ್ಶನ್ ಸೇರಿ 7 ಮಂದಿ ಜಾಮೀನು ಭವಿಷ್ಯ ಇಂದು?

ಮೂಲತಃ ಹೈದರಾಬಾದ್ ಮೂಲದ ಚಕ್ರಧರ್ ಅವರ ತಂದೆ ಸರ್ಕಾರಿ ಅಧಿಕಾರಿಯಾಗಿದ್ದರೆ, ತಾಯಿ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ವಯಸ್ಸಿನಿಂದಲೇ ಚಿತ್ರ ಬಿಡಿಸುತ್ತಿದ್ದ ಇವರು ನಂತರ ಸರ್ಕಾರ ಆಯೋಜಿಸುವ ಲೋಗೋ ಸ್ಪರ್ಧೆಗಳಿಗೆ ನಿರಂತರವಾಗಿ ಲೋಗೋ ಕಳುಹಿಸುತ್ತಿದ್ದರು. ಇದರಿಂದಾಗಿ ಕುಟುಂಬದಲ್ಲಿ ಚಕ್ರಧರ್   ಈಗ ‘ಲೋಗೋ ಮ್ಯಾನ್‘ ಎಂದೇ ಪ್ರಸಿದ್ಧರಾಗಿದ್ದಾರೆ.

ಈ ಹಿಂದೆ ಸ್ವಚ್ಛ ಭಾರತ್, ಬೇಟಿ ಬಚಾವೋ ಸೇರಿದಂತೆ ಆನೇಕ ಸರ್ಕಾರದ ಯೋಜನೆಗಳಿಗೆ ಲೋಗೋ ವನ್ನು MyGov.in ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಿದ್ದೇನೆ. ಅಂತಿಮ ಹಂತಕ್ಕೆ ಲೋಗೋ ಆಯ್ಕೆಯಾಗುತ್ತಿದ್ದರೂ ಪ್ರಶಸ್ತಿ ಗಳಿಸದೇ ಇದ್ದಾಗ ನನಗೆ ಬೇಸರವಾಗುತಿತ್ತು. ಆದರೂ ನಾನು ಉತ್ಸಾಹ ಕಳೆದುಕೊಳ್ಳಲಿಲ್ಲ. ಈಗ 31ನೇ ಪ್ರಯತ್ನದಲ್ಲಿ ನಾನು ಜಯಗಳಿಸಿದ್ದು, ಚಿರತೆ ಇರುವ ಲೋಗೋ ಬುಲೆಟ್ ರೈಲು ಯೋಜನೆಗೆ ಆಯ್ಕೆ ಆಗಿದ್ದು ನನಗೆ ಬಹಳ ಸಂತಸವಾಗಿದೆ. ಸರ್ಕಾರದ ದಾಖಲೆ, ಲೆಟರ್ ಹೆಡ್ ಗಳಲ್ಲಿ ನನ್ನ ಲೋಗೋ ವನ್ನು ನೋಡಲು ನಾನು ಕಾತರನಾಗಿದ್ದೇನೆ ಎಂದು ಚಕ್ರಧರ್ ಅವರು ಪ್ರತಿಕ್ರಿಯಿಸಿದ್ದಾರೆ.

ಬಹುಮಾನ ಎಷ್ಟು? ಮೊದಲ ಸ್ಥಾನ ಪಡೆದ ಚಕ್ರಧರ್ ಅವರಿಗೆ ಬುಲೆಟ್ ರೈಲು ಯೋಜನೆ ಮತ್ತು ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೋರೇಷನ್(ಎನ್‍ಎಚ್‍ಎಸ್‍ಆರ್‍ಸಿಎಲ್) 1 ಲಕ್ಷ ರೂ. ಬಹುಮಾನ ನೀಡಿ ಪುರಸ್ಕರಿಸಿದೆ. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದು, ಕ್ರಮವಾಗಿ 75 ಸಾವಿರ ರೂ. ಮತ್ತು 50 ಸಾವಿರ ರೂ. ಬಹುಮಾನ ಪಡೆದಿದ್ದಾರೆ.

ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ದೇಶದ ಮೊದಲ ಬುಲೆಟ್ ರೈಲು ಯೋಜನೆಗೆ ಸಪ್ಟೆಂಬರ್ 14 ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅಹಮದಾಬಾದ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಿ ಚಾಲನೆ ನೀಡಿದ್ದರು. 75 ವರ್ಷದ ಸ್ವಾತಂತ್ರ್ಯ ಸಂಭ್ರಮಕ್ಕೆ ದೇಶದ ಜನರಿಗೆ ಗಿಫ್ಟ್ ನೀಡಲು ಸರ್ಕಾರ ಮುಂದಾಗಿದ್ದು, 2022 ಆಗಸ್ಟ್ 15ಕ್ಕೆ ಮೊದಲ ಬುಲೆಟ್ ರೈಲು ಓಡಾಟ ಆರಂಭಿಸಲಿದೆ.

ಇದನ್ನೂ ಓದಿ: ಬುಲೆಟ್ ರೈಲು ಯೋಜನೆ: ನೀವು ತಿಳಿದುಕೊಳ್ಳಲೇಬೇಕಾದ 10 ವಿಚಾರಗಳು ಇಲ್ಲಿದೆ

 

PM @narendramodi welcomes Japanese PM @AbeShinzo at Mahatma Mandir pic.twitter.com/nyyU7b7Tq3

— PIB India (@PIB_India) September 14, 2017

प्रधानमंत्री @narendramodi और जापान के प्रधानमंत्री @AbeShinzo ग्लोबल सीईओ को संबोधित करते हुए https://t.co/MPLNApV7a4

— पीआईबी हिंदी (@PIBHindi) September 14, 2017

Prime Ministers @AbeShinzo and @narendramodi at Mahatma Mandir before their talks earlier today. pic.twitter.com/LikZaeMLuz

— PMO India (@PMOIndia) September 14, 2017

Expanding the horizons of bilateral relationship.
The two leaders witness the exchange of MoUs/Agreements between #IndiaJapan pic.twitter.com/OBARyOTGOy

— Arindam Bagchi (@MEAIndia) September 14, 2017

PM @narendramodi and Japanese PM @AbeShinzo during delegation level talks at Mahatma Mandir in Gandhinagar. pic.twitter.com/uwrWMb0adi

— PIB India (@PIB_India) September 14, 2017

द्धिपक्षीय संबंधों का विस्तार
दोनों प्रधान मंत्रिओं के समक्ष #IndiaJapan के बीच समझौता ज्ञापनों का आदान-प्रदान हुआ pic.twitter.com/mpBDxqORkt

— Arindam Bagchi (@MEAIndia) September 14, 2017

विशेष सामरिक और वैश्विक साझेदारी की मजबूती
दोनों प्रधान मंत्रिओं ने द्धिपक्षीय सहयोग के सभी क्षेत्रों की समीक्षा की pic.twitter.com/4J2x0YKM74

— Arindam Bagchi (@MEAIndia) September 14, 2017

शान्ति एवं समृद्धि का समन्वय
द्धिपक्षीय वार्ता से पहले,प्रधानमंत्री @narendramodi ने प्रधानमंत्री @AbeShinzo का महात्मामंदिर में स्वागत किया pic.twitter.com/TXn9Ed2mcs

— Arindam Bagchi (@MEAIndia) September 14, 2017

PM @narendramodi & Japanese PM @AbeShinzo visit Dandi Kutir, in Gandhinagar. pic.twitter.com/KX39QjV1ol

— PIB India (@PIB_India) September 14, 2017

PM @narendramodi & Japanese PM @AbeShinzo visit Dandi Kutir, in Gandhinagar. pic.twitter.com/6PqKJ6t5LB

— PIB India (@PIB_India) September 14, 2017

PM @narendramodi & Japanese PM @AbeShinzo visit Dandi Kutir, in Gandhinagar. pic.twitter.com/ry0KbInJWi

— PIB India (@PIB_India) September 14, 2017

PM @narendramodi & Japanese PM @AbeShinzo visit Dandi Kutir, in Gandhinagar. pic.twitter.com/XCWhbob0nM

— PIB India (@PIB_India) September 14, 2017

महात्मा की विरासत का संरक्षण
दोनों प्रधान मंत्रिओं ने दांडी कुटीर का दौरा किया #SwagatShinzoSan pic.twitter.com/02vAbRVNvz

— Arindam Bagchi (@MEAIndia) September 14, 2017

PM @narendramodi & Japanese PM @AbeShinzo laying foundation stone for Mumbai-Ahmedabad High speed Rail Project. pic.twitter.com/sxwCjnv9cV

— PIB India (@PIB_India) September 14, 2017

#Mumbai – #Ahmedabad #BulletTrain: a vision of speed towards #NewIndia
Groundbreaking ceremony: https://t.co/XHQYqr3nvY pic.twitter.com/T75RiKvYnn

— PIB India (@PIB_India) September 14, 2017

Towards next gen infrastructure…foundation stone for India's first high speed rail laid by PMs @AbeShinzo and @narendramodi. pic.twitter.com/YbQXSakJaZ

— PMO India (@PMOIndia) September 14, 2017

#BulletTrain4Growth
From Apru Ahmedabad to Aamchi Mumbai,the High Speed Rail Project is India's 1st bullet train;fast-tracking @RailMinIndia pic.twitter.com/geFB2tRhJ7

— Indian Diplomacy (@IndianDiplomacy) September 14, 2017

In the august presence of PM @NarendraModi & H.E. @AbeShinzo, spoke on how the Bullet train project will contribute in building a New India pic.twitter.com/GTRMCbPCJF

— Piyush Goyal (@PiyushGoyal) September 14, 2017

Share This Article
Facebook Whatsapp Whatsapp Telegram
Previous Article ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು ಧಗಧಗನೇ ಹೊತ್ತಿ ಉರಿದ ಶಾಲಾ ಬಸ್- ಅಪಾಯದಿಂದ 30 ವಿದ್ಯಾರ್ಥಿಗಳು ಪಾರು
Next Article ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು! ಗಂಡನ ಕೊಲ್ಲಲು ಹಾಲಿಗೆ ವಿಷ ಹಾಕಿದ್ಳು – ಅದೇ ಹಾಲಿನಿಂದ ಮಾಡಿದ ಲಸ್ಸಿ ಕುಡಿದು 13 ಸಾವು – ಪ್ರೀತಿ ಮಾಯೆ ಹುಷಾರು!
Leave a Comment

Leave a Reply

Your email address will not be published. Required fields are marked *

Popular News

ದಿನ ಭವಿಷ್ಯ 24-07-2025
ದಿನ ಭವಿಷ್ಯ 24-07-2025
ರಾಜ್ಯದ ಹವಾಮಾನ ವರದಿ 24-07-2025
Public TVPublic TV