ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಗೆ ಶುಕ್ರವಾರ (ಏ.10) ನಡೆದ ಲಿಖಿತ ಪರೀಕ್ಷೆ ಬಳಿಕ ಒಂದು ಗಂಟೆಯಲ್ಲೇ ಎಲ್ಲ ಓಎಂಆರ್ ಶೀಟ್‌ಗಳನ್ನು (OMR Sheet) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದು, ಬೆಂಗಳೂರಿನ ಎರಡು ಮತ್ತು ಧಾರವಾಡದ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಮುಗಿದ ಕ್ಷಣದಿಂದಲೇ ಓಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ
ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸೆಷನ್ಸ್‌ನಲ್ಲಿ ಪರೀಕ್ಷೆ ನಡೆದಿದ್ದು, ಪರೀಕ್ಷೆ ಮುಗಿದ ಕೂಡಲೇ ಓಎಂಆರ್ ಉತ್ತರ ಪತ್ರಿಕೆಗಳನ್ನು ತಂದು ಸ್ಕ್ಯಾನ್ ಮಾಡಲಾಗಿದೆ. ನಂತರ ಅವುಗಳನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರವಾರು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಯಾರು ಬೇಕಾದರೂ ನೋಡಿಕೊಳ್ಳಬಹುದು. ಇದು ಕೆಇಎ ಅಳವಡಿಸಿಕೊಂಡಿರುವ ಪಾರದರ್ಶಕವಾದ ಕ್ರಮ ಅವರು ಹೇಳಿದ್ದಾರೆ.

