ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಇಬ್ಬರಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್‌ ಪತ್ತೆ

Public TV
1 Min Read

ಲಂಡನ್: ಕೊರೊನಾ ವೈರಸ್‌ ರೂಪಾಂತರ ತಳಿ ಓಮಿಕ್ರಾನ್‌ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಬ್ರಿಟನ್‌ನಲ್ಲಿ ಪ್ರಥಮ ಬಾರಿಗೆ ಹೊಸ ತಳಿಯ ಎರಡು ಪ್ರಕರಣಗಳು ದೃಢಪಟ್ಟಿವೆ.

ಹೊಸ ತಳಿ ಸೋಂಕಿಗೆ ಒಳಗಾಗಿರುವ ಇಬ್ಬರು ಸಹ ದಕ್ಷಿಣ ಆಫ್ರಿಕಾದಿಂದ ಪ್ರಯಾಣ ಬೆಳೆಸಿದವರಾಗಿದ್ದಾರೆ ಎಂದು ಉನ್ನತ ಮೂಲಗಳು ದೃಢಪಡಿಸಿವೆ. ಇದನ್ನೂ ಓದಿ: ಲಸಿಕೆ ಪಡೆದವರಲ್ಲಿಯೂ ಒಮಿಕ್ರಾನ್ ಹೊಸ ತಳಿ ಪತ್ತೆ – ಆತಂಕ ಯಾಕೆ?

ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಸ್ವಯಂ ಐಸೊಲೇಷನ್‌ನಲ್ಲಿ ಇರುವಂತೆ ಮಾಡುವ ಕಾರ್ಯಾಚರಣೆಯನ್ನು ತ್ವರಿತಗೊಳಿಸಿದ್ದೇವೆ ಎಂದು ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ತಿಳಿಸಿದ್ದಾರೆ.

ಕೊರೊನಾ ರೂಪಾಂತರಿ ಓಮಿಕ್ರಾನ್‌ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು. ವಿಶ್ವಾದ್ಯಂತ ಈವರೆಗೆ ಒಟ್ಟು 87 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದು ಬಹು ಬೇಗ ಹರಡುವ ಹಾಗೂ ಕೋವಿಡ್‌ ಲಸಿಕೆಗಳು ಸೃಷ್ಟಿಸಿರುವ ಪ್ರತಿಕಾಯಗಳನ್ನು ಭೇದಿಸಿ ದೇಹವನ್ನು ಹೊಕ್ಕುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಎರಡು ಡೋಸ್‌ ಲಸಿಕೆ ಪಡೆದಿದ್ದರೂ ಕೊರೊನಾ ಹೊಸ ರೂಪಾಂತರ ತಳಿ ತಗುಲುತ್ತದೆ ಎಂದು ಜಿನೋಮ್‌ ಸೀಕ್ವೆನ್ಸ್‌ನಿಂದ ತಿಳಿದುಬಂದಿದೆ. ಇದನ್ನೂ ಓದಿ: ದಕ್ಷಿಣ ಅಫ್ರಿಕಾದಿಂದ ಬಂದವರಲ್ಲಿ ಇಬ್ಬರಿಗೆ ಸೋಂಕು- ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌

ಹೊಸ ತಳಿ ಬಗ್ಗೆ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರ ಮಧ್ಯೆಯೇ ದಕ್ಷಿಣ ಆಫ್ರಿಕಾದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದವರಲ್ಲಿ ಇಬ್ಬರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿವೆ. ಅವರಿಂದ ಸ್ಯಾಂಪಲ್ಸ್‌ ಅನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *