ಪಿಂಚಣಿಗಾಗಿ ನಡೆಯಲಾಗದೇ ಚೇರ್‌ ಹಿಡಿದು ಬ್ಯಾಂಕ್‌ಗೆ ಅಜ್ಜಿ ಅಲೆದಾಟ

By
1 Min Read

ಭುವನೇಶ್ವರ: ಪಿಂಚಣಿ ಪಡೆಯುವುದಕ್ಕಾಗಿ ವೃದ್ಧೆಯೊಬ್ಬರು ನಡೆಯಲಾಗದ ಪರಿಸ್ಥಿತಿಯಲ್ಲೂ ಚೇರನ್ನು ಸಹಾಯವಾಗಿ ಬಳಸಿಕೊಂಡು ಬ್ಯಾಂಕ್‌ಗೆ ಆಗಮಿಸುತ್ತಿರುವ ಮನಕಲಕುವ ವೀಡಿಯೋ ವೈರಲ್‌ ಆಗಿದೆ.

ಒಡಿಶಾದ (Odisha) ಜಾರಿಗಾಂವ್‌ ನಿವಾಸಿ ವೃದ್ಧೆ ಸೂರ್ಯ ಹರಿಜನ್‌ ಹೆಸರಿನ ವೃದ್ಧೆ ಪಿಂಚಣಿಗಾಗಿ ಪರಿತಪಿಸುತ್ತಿದ್ದಾರೆ. ಪಿಂಚಣಿ ಹಣಕ್ಕಾಗಿ ನಿತ್ಯ ಬ್ಯಾಂಕ್‌ಗೆ ಅಲೆಯುತ್ತಿದ್ದಾರೆ. ಆದರೂ ಅವರ ಸಮಸ್ಯೆ ಬಗೆಹರಿದಿಲ್ಲ. ಇದನ್ನೂ ಓದಿ: ಗೋಧ್ರಾ ರೈಲು ಬೋಗಿ ಸುಟ್ಟ ಪ್ರಕರಣ – 8 ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು

ವೃದ್ಧೆಗೆ ನಡೆಯಲು ಕಷ್ಟವಾದ ಕಾರಣ ಸಹಾಯಕ್ಕಾಗಿ ಪ್ಲಾಸ್ಟಿಕ್‌ ಚೇರ್‌ನ್ನು ಬಳಸಿಕೊಂಡಿದ್ದಾರೆ. ಅದನ್ನು ಹಿಡಿದುಕೊಂಡು ಬರಿಗಾಲಲ್ಲೇ ರಸ್ತೆಯಲ್ಲಿ ನಡೆದು ಬರುತ್ತಿರುವ ದೃಶ್ಯದ ವೀಡಿಯೋ ವೈರಲ್‌ ಆಗಿದೆ.

ವೃದ್ಧೆಯ ಪಿಂಚಣಿ ಸಮಸ್ಯೆ ಕುರಿತು ಪ್ರತಿಕ್ರಿಯಿಸಿರುವ ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌, ವೃದ್ಧೆಯ ಬೆರಳುಗಳು ಮುರಿದುಹೋಗಿವೆ. ಆದ್ದರಿಂದ ಆಕೆ ಪಿಂಚಣಿ ಹಣವನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾಳೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಡಾನ್ ಸಂಘರ್ಷ – ಭಾರತೀಯರ ಭದ್ರತೆ ಕುರಿತು ಪರಿಶೀಲನೆಗೆ ಮೋದಿ ಸಭೆ

Share This Article