ನಾವು ಕರೆಂಟ್ ಬಿಲ್ ಕಟ್ಟಲ್ಲ, ಅದ್ಯಾವ್ ನನ್ಮಗ ಬರ್ತಾನೋ ಬರಲಿ- ಬೆಸ್ಕಾಂ ಸಿಬ್ಬಂದಿಗೆ ವೃದ್ಧೆ ಅವಾಜ್

Public TV
1 Min Read

ತುಮಕೂರು: ನಾವು ಕರೆಂಟ್ ಬಿಲ್ ಕಟ್ಟಲ್ಲ. ಅದ್ಯಾವ್ ನನ್ಮಗ ಬರ್ತಾನೋ ಬರಲಿ ಎಂದು ಬೆಸ್ಕಾಂ (BESCOM) ಸಿಬ್ಬಂದಿಗೆ ವೃದ್ಧೆ ಅವಾಜ್ ಹಾಕಿದ ಪ್ರಸಂಗ ನಡೆದಿದೆ.

ಜಿ.ಪರಮೇಶ್ವರ್ (G Parameshwar) ಕ್ಷೇತ್ರ ಕೊರಟಗೆರೆ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದೆ. ಬೆಸ್ಕಾ ಸಿಬ್ಬಂದಿಯು ಮೇ ತಿಂಗಳ ಬಿಲ್ ಕೊಡಲು ತೆರಳಿದ್ದ. ಈ ವೇಳೆ ವೃದ್ಧೆ, ಕಾಂಗ್ರೆಸ್ (Congress) ನವರು ಫ್ರೀ ಕೊಡ್ತಿನಿ ಅಂದಿದ್ರು. ಈಗ ನೀವು ಬಿಲ್ ಕೇಳೋಕೆ ಬಂದಿದ್ರಾ?. ನಾವು ಬಿಲ್ ಕಟ್ಟಲ್ಲ. ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (DK Shivakumar) ರನ್ನು ಕೇಳಿ ಎಂದು ಕಿಡಿಕಾರಿದ್ದಾರೆ.

ಸರ್ಕಾರ ಬಂದರೆ ಕರೆಂಟ್ ಫ್ರೀ ಅಂದಿದ್ರು. ಈಗ ನೀವು ಬಿಲ್ ಕೇಳಬೇಡಿ. ಇನ್ಮೆಲಿಂದ ನಮ್ಮೂರಿಗೆ ಬಿಲ್ ಕೇಳೋಕೆ ಬರಬೇಡಿ ಎಂದು ವೃದ್ಧೆ ಮತ್ತು ಮಹಿಳೆಯರು ಬೆಸ್ಕಾಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ವಿದ್ಯುತ್‌ ಬಿಲ್‌ ನೀಡಲು ಬಂದ ಸಿಬ್ಬಂದಿಗೆ ಮಹಿಳೆ ಹಿಗ್ಗಾಮುಗ್ಗ ಕ್ಲಾಸ್‌

Share This Article