ತುಮಕೂರು: ಎರಡು ದಿನ ಕಾರ್ಮಿಕ ಮುಷ್ಕರ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಭಾರತ್ ಬಂದ್ ಘೋಷಣೆಯಾಗಿದೆ. ಇದನ್ನು ಅರಿಯದ ಹೂ ಮಾರುವ ವೃದ್ಧೆಯೊಬ್ಬರು ತುಮಕೂರು ಬಸ್ ನಿಲ್ದಾಣಕ್ಕೆ ಬಂದು ಬಂದ್‍ನಿಂದ 200-300 ನಷ್ಟ ಆಯಿತು ಎಂದು ದುಃಖಪಡುತ್ತಿದ್ದಾರೆ.
ವೃದ್ಧೆ ಭಾಗ್ಯಮ್ಮ ಹೊಟ್ಟೆ ಪಾಡಿಗೆ ತುಮಕೂರು ಬಸ್ ನಿಲ್ದಾಣದಲ್ಲಿ ಕುಳಿತು ಹೂ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಬಂದ್ ಬಗ್ಗೆ ಮಾಹಿತಿ ಇಲ್ಲದ ಕಾರಣ ವ್ಯಾಪಾರಕ್ಕೆ ಬಂದಿದ್ದಾರೆ. ಅಲ್ಲದೇ ಬಂದ್ ಹಿನ್ನೆಲೆಯಲ್ಲಿ ಅವರ ವ್ಯಾಪಾರಕ್ಕೆ ಕುತ್ತು ಬಿದ್ದಿದೆ.
ಬಂದ್ ಬಗ್ಗೆ ಮಾಹಿತಿಯಿಲ್ಲದೇ ಭಾಗ್ಯಮ್ಮ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಯಾಕೋ ಬಸ್ ಸ್ಟ್ಯಾಂಡ್ ನಲ್ಲಿ ಇಂದು ಜನರೇ ಇಲ್ಲ. ಬಸ್ ಗಳು ಸರಿಯಾಗಿ ಬರುತ್ತಿಲ್ಲ ಎಂದು ಸಾರ್ವಜನಿಕರಿಗೆ ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಇಂದು ಹಾಗೂ ನಾಳೆ ಬಂದ್ ಎಂದು ಉತ್ತರಿಸಿದ್ದಾರೆ.
ಆಗ ಭಾಗ್ಯಮ್ಮ ಮನೆಯಲ್ಲಿ ಟಿವಿ ಇಲ್ಲ. ಗೊತ್ತಿಲ್ಲದೇ ಬಂಡವಾಳ ಹಾಕಿಬಿಟ್ಟೆ. ಈ ಬಂದ್ ನಿಂದ 200-300 ನಷ್ಟವಾಯಿತು. ಹೀಗಾದರೆ ಬಡವರ ಬಗ್ಗರು ಏನು ಮಾಡಬೇಕು. ಜನರು ಮಿನಿಸ್ಟ್ರು ಕುಳಿತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಹೀಗೆ ಜನರಿಗೆ ತೊಂದರೆ ಕೊಟ್ಟರೆ ಹೇಗೆ? ಈಗ ನಾನು ಬೀದಿ ಬೀದಿ ಸುತ್ತಿ ವ್ಯಾಪಾರ ಮಾಡಬೇಕು ಎಂದು ದಃಖಪಟ್ಟರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv