ಮೃತಪಟ್ಟ ಮುದ್ದಿನ ಶ್ವಾನದ ಸವಿನೆನಪಿಗಾಗಿ ದೇಗುಲ ನಿರ್ಮಾಣ

Public TV
1 Min Read

ಚೆನ್ನೈ: ಸಾಕು ಪ್ರಾಣಿಗಳು ಅದರಲ್ಲಿಯೂ ಶ್ವಾನವನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ ಕಾಣುವವರೇ ಹೆಚ್ಚು. ಪ್ರೀತಿಯಿಂದ ಸಾಕಿದ ಶ್ವಾನ ಮೃತಪಟ್ಟರೆ ಮನೆಯ ಸದಸ್ಯನನ್ನು ಕಳೆದುಕೊಂಡಂತೆ ದುಃಖವಾಗುತ್ತದೆ. ಅಂತೆಯೇ ತಮಿಳುನಾಡು ಮೂಲದ ವ್ಯಕ್ತಿಯೊಬ್ಬರು ತಾವು ಪ್ರೀತಿಯಿಂದ ಸಾಕಿದ್ದ ಶ್ವಾನ ಮೃತಪಟ್ಟ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ದೇವಾಲಯವನ್ನೇ ನಿರ್ಮಿಸಿ ಇದೀಗ ಸುದ್ದಿಯಾಗಿದ್ದಾರೆ.

ತಮಿಳುನಾಡು ಶಿವಗಂಗೆ ಮೂಲದ ನಿವೃತ್ತ ಸರ್ಕಾರಿ ನೌಕರ ಮುತ್ತು ಎಂಬವರು ತಮ್ಮ ಮುದ್ದಿನ ಶ್ವಾನಕ್ಕೆ ಈ ರೀತಿ ಗೌರವ ಸಲ್ಲಿಸಿದ್ದಾರೆ. ಮನೆಯಲ್ಲಿ ಮೃತಪಟ್ಟ ಲ್ಯಾಬ್ರಡಾರ್ ಜಾತಿಯ ಟಾಮ್ ಎಂಬ ಹೆಸರಿನ ಶ್ವಾನದ ನೆನಪಿಗಾಗಿ ತಮ್ಮ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ.

11 ವರ್ಷಗಳಿಂದ ಜೊತೆಯಿದ್ದ ಟಾಮ್ ಗೆ ಕಳೆದ ವರ್ಷ ಅಂದರೆ 2021ರ ಜನವರಿಯಿಂದ ಅನಾರೋಗ್ಯ ಕಾಣಿಸಿಕೊಂಡಿದೆ. ಬಳಿಕ ಸಾಕಷ್ಟು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪರಿಣಾಮ 2022ರ ಜನವರಿಯಲ್ಲಿ ಟಾಮ್ ಇಹಲೋಕ ತ್ಯಜಿಸಿದೆ. ಇದರಿಂದ ಮುತ್ತು ಕುಟುಂಬ ದುಃಖದ ಕಡಲಲ್ಲಿ ಮುಳುಗಿತ್ತು. ಇದನ್ನೂ ಓದಿ: ಕೇಜ್ರಿವಾಲ್ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ ಬಲಿಪಶು: ಗಂಭೀರ್

ಇದೀಗ ಟಾಮ್ ಸವಿನೆನಪಿಗಾಗಿ ಮುತ್ತು ಕುಟುಂಬ 80 ಸಾವಿರ ರೂ. ಖರ್ಚು ಮಾಡಿ ಶ್ವಾನದ ಅಮೃತಶಿಲೆಯ ಪ್ರತಿಮೆಯನ್ನು ಮಾಡಿದ್ದಾರೆ. ನಂತರ ಶಿವಗಂಗಾ ಜಿಲ್ಲೆಯ ಮನಮಧುರೈ ಬಳಿಕ ಬ್ರಾಹ್ಮಣಕುರಿಚಿಯ ತಮ್ಮ ಕೃಷಿ ಭೂಮಿಯಲ್ಲಿ ದೇಗುಲ ನಿರ್ಮಾಣ ಮಾಡಿದ್ದಾರೆ.

ಸದ್ಯ ಪ್ರತಿಮೆಗೆ ಪ್ರತಿನಿತ್ಯ ವೈವೇದ್ಯವನ್ನು ಸಲ್ಲಿಸಲಾಗುತ್ತಿದೆ. ಇತ್ತ ಸಾರ್ವಜನಿಕರು ಕೂಡ ದೇವಾಲಯಕ್ಕೆ ಭೇಟಿ ಕೊಟ್ಟು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ನಿರಾಶ್ರಿತನನ್ನು ಅಪ್ಪಿಕೊಂಡು ಮಡಿಲಲ್ಲಿ ಮಲಗಿದ ಶ್ವಾನ- ನೆಟ್ಟಿಗರ ಮನಗೆದ್ದ ವೀಡಿಯೋ

Share This Article
Leave a Comment

Leave a Reply

Your email address will not be published. Required fields are marked *