ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಸಿಕ್ಕಿಬಿದ್ದ ವೃದ್ಧ- ಕಾರಣ ಕೇಳಿ ಅಧಿಕಾರಿಗಳೇ ಶಾಕ್!

Public TV
2 Min Read

ಚಿಕ್ಕಮಗಳೂರು: ವೃದ್ಧನೊಬ್ಬ ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ.

ಬಂಧಿತನನ್ನು ಸುಮಾರು 60 ವರ್ಷದ ಬಸವೇಗೌಡ ಎಂದು ಗುರುತಿಸಲಾಗಿದೆ. ವೃದ್ಧನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವೃದ್ಧನ ಉತ್ತರ ಕೇಳಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ವೃದ್ಧ ನಿಸಿದ ಉತ್ತರವೇನು..?
ಬೇರೆ ಯಾರದರೂ ಬೆಂಕಿ ನೀಡಿದರೆ ಬೆಂಕಿ ನನ್ನ ಹೊಲಕ್ಕೂ ಬರಬಹುದು. ಅದಕ್ಕೆ ನಾನೇ ನನ್ನ ಹೊಲಕ್ಕೆ ಬೆಂಕಿ ಬಾರದಿರಲಿ ಎಂದು ಬೆಂಕಿ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ವೃದ್ಧನ ಮಾತು ಕೇಳಿದ ಅರಣ್ಯ ಅಧಿಕಾರಿಗಳು ಆತನಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಬೆಂಕಿ ಬೀಳುತ್ತಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿಯಿಂದ ಕಾಡನ್ನ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳು ಈಗಾಗಲೇ ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಕೆಲವರ ಅಜ್ಞಾನದಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

ಬಂಧಿತ ಬಸವೇಗೌಡ ಬೆಂಕಿ ನೀಡಿದ್ದರಿಂದ ಸುಮಾರು 10 ಎಕರೆಯಷ್ಟು ಅರಣ್ಯ ಸುಟ್ಟು ಹೋಗಿದೆ. ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ. ಬಯಲುಸೀಮೆ ಭಾಗದಲ್ಲಿ ದನ-ಕುರಿಗಳನ್ನು ಸಾಕುವವರ ಸಂಖ್ಯೆಯೂ ಹೆಚ್ಚಿದೆ. ಅರಣ್ಯ ಬೆಂಕಿ ನೀಡಿದರೆ ಮಳೆ ಬಂದ ಕೂಡಲೇ ಹುಲ್ಲು ಹುಲುಸಾಗಿ ಬೆಳೆಯುತ್ತೆ ಎಂದು ಕೆಲ ಸ್ಥಳಿಯರೇ ಅರಣ್ಯ ಬೆಂಕಿ ಕೊಡುತ್ತಾರೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು

ಅರಣ್ಯಕ್ಕೆ ಬೆಂಕಿ ಕೊಡುವುದು ತುಂಬಾ ಸುಲಭ. ಅದರಿಂದ ಆಗುವ ಆನಾಹುತ, ಅದನ್ನ ಆರಿಸಲು ಎಷ್ಟು ಕಷ್ಟ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ, ಅಧಿಕಾರಿಗಳು ಕೂಡ ಸ್ಥಳೀಯರಲ್ಲಿ ಅರಣ್ಯಕ್ಕೆ ಬೆಂಕಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕ ಆದರ್ಶ್ ಹಾಗೂ ಅರಣ್ಯ ವೀಕ್ಷಕ ಗಿರೀಶ್ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *