ಹಠ ಮುಂದುವರಿಸಿದ ಓಲಾ, ಉಬರ್‌ – ಎಷ್ಟು ಕಮಿಷನ್‌ಗೆ ಬೇಡಿಕೆ?

Public TV
1 Min Read

ಬೆಂಗಳೂರು: ಓಲಾ, ಊಬರ್, ರಾಪಿಡೋ(Uber, Ola, Rapido) ಕಂಪನಿಗಳು ತಮ್ಮ ಹಠವನ್ನು ಮುಂದುವರಿಸಿವೆ. ಆಟೋ(Auto) ದರ ನಿಗದಿ ಸಂಬಂಧ ಸಾರಿಗೆ ಇಲಾಖೆ ನಡೆಸಿದ ಸಭೆಯಲ್ಲಿ ಭರ್ಜರಿ ಬೇಡಿಕೆ ಇರಿಸಿವೆ.

ಊಬರ್ ಕಂಪನಿ ಶೇ.10 ಪ್ಲಾಟ್‍ಫಾರಂ ಚಾರ್ಜ್, ಶೇ.5 ಜಿಎಸ್‍ಟಿ ವಿಧಿಸಬೇಕು ಎಂಬ ಬೇಡಿಕೆ ಜೊತೆಗೆ ಶೇ.25 ಕಮಿಷನ್ ಫಿಕ್ಸ್ ಮಾಡಿ ಅಂತಿದೆ. ಓಲಾದವರು ಶೇ.20 ಕಮಿಷನ್‍ಗೆ ಬೇಡಿಕೆ ಇಟ್ಟಿದೆ. ಇದನ್ನೂ ಓದಿ: ನನ್ನ ಜೊತೆ ಬಿಸಿನೆಸ್ ಮಾಡಲು ಯಾರೂ ಮುಂದೆ ಬರುತ್ತಿಲ್ಲ: ಡಿಕೆ ಶಿವಕುಮಾರ್‌ ಬೇಸರ 

ರಾಪಿಡೋ ಸಂಸ್ಥೆಯಯವರು ಕಿಲೋಮೀಟರ್‌ 50 ರೂಪಾಯಿಗೆ ಫಿಕ್ಸ್ ಮಾಡುವಂತೆ ಕೋರಿದ್ದಾರೆ. ಆದರೆ ಆಟೋ ಚಾಲಕರು ಮಾತ್ರ, ಮೊದಲು ಇವರ ಸೇವೆಗಳನ್ನೇ ಬಂದ್ ಮಾಡಿ ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಮಂಗಳವಾರ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾರಿಗೆ ಇಲಾಖೆ ಮುಂದಾಗಿದೆ.

Live Tv
[brid partner=56869869 player=32851 video=960834 autoplay=true]

Share This Article