ಕಲಬುರಗಿ: ಕಲಬುರಗಿ-ಜೇವರ್ಗಿ ಹೆದ್ದಾರಿಯಲ್ಲಿರುವ ನದಿ ಸಿನ್ನೂರ ಗ್ರಾಮದಲ್ಲಿ ರಿಲಯನ್ಸ್ ಪೆಟ್ರೋಲ್ ಬಂಕ್‍ಗೆ ಸೇರಿದ ಡೀಸೆಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆಯೇ ನಡುರಸ್ತೆಯಲ್ಲಿಯೇ ಅರ್ಧ ಟ್ಯಾಂಕರ್ ಡೀಸೆಲ್ ಸೋರಿ ಹೋಗಿತ್ತು. ಇನ್ನು ವಿಷಯ ತಿಳಿದ ಇನ್ನೊಂದು ಟ್ಯಾಂಕರ್ ಸ್ಥಳಕ್ಕೆ ದೌಡಾಯಿಸಿದ್ದು, ಉಳಿದ ಡೀಸೆಲ್ ಅದಕ್ಕೆ ತುಂಬಿಸಲಾಗುತ್ತಿದೆ. ಈ ಕಾರ್ಯಾಚರಣೆಯಿಂದ ಬೀದರ್- ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಿಲೋ ಮೀಟರ್‍ಗಟ್ಟಲೇ ವಾಹನಗಳು ಸಾಲು ಸಾಲು ನಿಂತಿವೆ. ಹೀಗಾಗಿ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಬಂದಿದ್ದಾರೆ. ಫರಹತಾಬಾದ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.