ಕದನ ವಿರಾಮದ ನಡುವೆಯೂ ಇರಾನ್‌ನ ತೈಲ ಸಂಸ್ಕರಣಾಗಾರದ ಮೇಲೆ ದಾಳಿ

1 Min Read

– ಕುವೈತ್, ಯುಎಇ ಮೇಲೆ ಇರಾನ್‌ ಅಟ್ಯಾಕ್‌

ಟೆಹ್ರಾನ್: ಕದನ ವಿರಾಮದ ಹೊರತಾಗಿಯೂ ಇರಾನ್‌ನ (Iran) ತೈಲ ಸಂಸ್ಕರಣಾಗಾರದ ಮೇಲೆ ದಾಳಿ ನಡೆದಿದೆ. ಅದಕ್ಕೆ ಪ್ರತಿಯಾಗಿ ಕುವೈತ್ (Kuwait), ಯುಎಇ (UAE) ಮೇಲೆ ಇರಾನ್‌ ದಾಳಿ ಮಾಡಿದೆ. ‌

ಇರಾನ್ ಮತ್ತು ಅಮೆರಿಕ ನಡುವೆ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದಿದೆ. ಆದರೂ ಇರಾನ್‌ನ ಲಾವನ್ ದ್ವೀಪದಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಶತ್ರು ದಾಳಿ ಎಂದು ಇರಾನ್‌ ತಿಳಿಸಿದೆ. ರಾಷ್ಟ್ರೀಯ ಇರಾನಿನ ತೈಲ ಸಂಸ್ಕರಣಾ ಮತ್ತು ವಿತರಣಾ ಕಂಪನಿ ಈ ದಾಳಿಯನ್ನು ವರದಿ ಮಾಡಿವೆ. ಇದನ್ನೂ ಓದಿ: US-Iran Ceasefire | ಕದನ ವಿರಾಮ ಸ್ವಾಗತಿಸಿದ ಭಾರತ

ಸ್ಥಳೀಯ ಸಮಯ ಸುಮಾರು 10 ಗಂಟೆಗೆ ತೈಲ ಸಂಸ್ಕರಣಾಗಾರ ಹಾನಿಗೊಳಗಾಗಿದೆ ಎಂದು ಕಂಪನಿ ತಿಳಿಸಿದೆ. ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯನ್ನು ನಂದಿಸಲು ಮತ್ತು ಸ್ಥಳವನ್ನು ಸುರಕ್ಷಿತಗೊಳಿಸಲು ಸುರಕ್ಷತಾ ಮತ್ತು ಅಗ್ನಿಶಾಮಕ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು.

ಅಮೆರಿಕ ಮತ್ತು ಇರಾನ್ ನಡುವೆ ಮಂಗಳವಾರ ಘೋಷಿಸಲಾದ ಕದನ ವಿರಾಮ ಒಪ್ಪಂದದ ಹೊರತಾಗಿಯೂ ಈ ದಾಳಿ ನಡೆದಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಆದರೂ ಬುಧವಾರ ಇರಾನ್‌ನಲ್ಲಿ ಮಾತ್ರವಲ್ಲದೆ ಗಲ್ಫ್ ಅರಬ್ ರಾಷ್ಟ್ರಗಳಲ್ಲಿಯೂ ದಾಳಿಗಳು ಪುನರಾರಂಭಗೊಂಡಿವೆ. ಇದನ್ನೂ ಓದಿ: ಇರಾನ್, ಇಸ್ರೇಲ್ ಕದನ ವಿರಾಮ ಬೆನ್ನಲ್ಲೇ ಚಿನ್ನ, ಬೆಳ್ಳಿ ಬೆಲೆ ಭಾರೀ ಏರಿಕೆ

Share This Article