Iran Israel War | ಬ್ಯಾರಲ್‌ಗೆ 100 ಡಾಲರ್‌ ಸಮೀಪಿಸಿದ ತೈಲ ಬೆಲೆ

1 Min Read

ಫ್ರಾಂಕ್‌ಫರ್ಟ್: ಇರಾನ್ (Iran) ಸೇರಿ ಕೊಲ್ಲಿ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ (War) ಪರಿಣಾಮದಿಂದ ಹೋರ್ಮುಜ್ ಜಲಸಂಧಿಯ ಪ್ರವೇಶವನ್ನೂ ನಿರ್ಬಂಧಿಸಿರುವುದು ಜಾಗತಿಕ ತೈಲ ಬೆಲೆಯ ಮೇಲೆ ವಿಪರೀತ ಪರಿಣಾಮ ಬೀರಿದೆ.

ಅಮೆರಿಕದ (America) ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83‌ ರೂ. ಆಗಿದೆ. ಬ್ರೆಂಟ್‌ ದರದಲ್ಲಿ 8.6% ಹೆಚ್ಚಳವಾಗಿ 7244.98 ರೂ. ತಲುಪಿದೆ. ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20% ರಷ್ಟು ತೈಲ ಸಾಗಣೆಯಾಗುತ್ತಿತ್ತು. ಆದರೆ ಅಲ್ಲಿ ಸಾಗುತ್ತಿದ್ದ ಹಡಗುಗಳ ಮೇಲಿನ ದಾಳಿ ಮುಂದುವರೆದಿರುವ ಕಾರಣ ಪೂರೈಕೆಗೆ ಅಡಚಣೆಯಾಗಿದೆ. ಇದರಿಂದಾಗಿ ಬೇಡಿಕೆ ಹೆಚ್ಚಿ, ದರದಲ್ಲೂ ಏರಿಕೆಯಾಗಿದೆ. ಈ ಜಲಸಂಧಿಯನ್ನು ತಪ್ಪಿಸಿ ತೈಲ ಪೂರೈಕೆ ಸಾಧ್ಯವಿದೆಯಾದರೂ ಆ ಮಾರ್ಗ ಉದ್ದವಿರುವ ಕಾರಣ ಬೆಲೆ ಏರಿಕೆಯಾಗುತ್ತದೆ. ಇದನ್ನೂ ಓದಿ: 4-5 ವಾರಗಳವರೆಗೆ ಮುಂದುವರಿಯುತ್ತೆ – ಅರಬ್‌ ರಾಷ್ಟ್ರಗಳು ನಮ್ಮ ಜೊತೆ ಸೇರಲು ಬಯಸುತ್ತಿವೆ: ಟ್ರಂಪ್‌

ಅನಿಲ ಬೆಲೆ ಹೆಚ್ಚಳ: ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕತಾರ್ ಮೇಲೆ ಇರಾನ್ ದಾಳಿ ಮಾಡಿರುವ ಕಾರಣ ಅಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸರ್ಕಾರಿ ಒಡೆತನದ ಪೆಟ್ರೋಲಿಯಂ ಕಂಪನಿ ಕತಾರ್‌ ಎನರ್ಜಿ ಅಧಿಕೃತವಾಗಿ ಘೋಷಿಸಿದೆ. ಪರಿಣಾಮ ಯುರೋಪ್‌ನಲ್ಲಿ ಅನಿಲದ ಬೆಲೆಯಲ್ಲಿ 40% ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: Iran Israel War | ಇರಾನ್‌ ನಲ್ಲಿ 176 ಮಕ್ಕಳು ಸೇರಿ 700 ಕ್ಕೂ ಹೆಚ್ಚು ಜನ ಸಾವು – ಅಮೆರಿಕ

Share This Article