ಡಿಸಿಪಿ ಅಣ್ಣಮಲೈ ತಂಡದಿಂದ ಖತರ್ನಾಕ್ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್

Public TV
1 Min Read

ಬೆಂಗಳೂರು: ಬ್ಯಾಂಕಿಗೆ ಹೋಗುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಹಣ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿಕುಪ್ಪಂ  ಗ್ಯಾಂಗ್ ಸದಸ್ಯರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್, ರಮೇಶ್, ರಾಜು, ಕಾರ್ತಿಕ್, ಅಂಕಯ್ಯಾ ಅಲಿಯಾಸ್ ಬಾಬು ಬಂಧಿತ ಆರೋಪಿಗಳು. ನಗರ ಸೇರಿದಂತೆ ಹಲವು ಕಡೆ ಬ್ಯಾಂಕ್ ತೆರಳುವ ಗ್ರಾಹಕರನ್ನ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್ ಕ್ಷಣಾರ್ಧದಲ್ಲಿ ಹಣ ದೋಚಿ ಪರಾರಿಯಾಗುತ್ತಿದ್ದರು.

ಬ್ಯಾಂಕ್ ಗ್ರಾಹಕರನ್ನೇ ಗುರಿ ಮಾಡಿ ಕಳ್ಳತನ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಡಿಸಿಪಿ ಅಣ್ಣಾಮಲೈ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಇದರಂತೆ ಸುಬ್ರಮಣ್ಯಪುರ ಎಸಿಪಿ ಮಹದೇವ್ ಮುಂದಾಳತ್ವದ ತಂಡ ಆರೋಪಿಗಳ ಚಲನ ವಲನಗಳ ಮೇಲೆ ನಿಗಾವಹಿಸಿ ಇಂದು ಖತರ್ನಾಕ್ ಗ್ಯಾಂಗಿನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಗ್ಯಾಂಗ್ ಕಾರ್ಯಾಚರಣೆ ಹೀಗಿತ್ತು: ಬ್ಯಾಂಕ್​ನಲ್ಲಿ  50ಸಾವಿರಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಿದ ಗ್ರಾಹಕರನ್ನು ಮಾತ್ರ  ಗ್ಯಾಂಗ್ ಟಾರ್ಗೆಟ್ ಮಾಡುತ್ತಿದ್ದರು. ಮೊದಲು ಬ್ಯಾಂಕ್ ಒಳಗಿದ್ದ ಗ್ಯಾಂಗ್ ಸದಸ್ಯ ಇತರೇ ಸದಸ್ಯರಿಗೆ ತಮ್ಮ ಗುರಿ ಯಾರು ಎಂದು ಖಚಿತ ಪಡಿಸುತ್ತಿದ್ದ. ಬಳಿಕ ಹಣ ಪಡೆದ ಗ್ರಾಹಕ ಬ್ಯಾಂಕ್ ನಿಂದ ಹೊರ ಬರುತ್ತಿದಂತೆ ಆತನ ಮೇಲೆ ಕೆರೆತ ಆರಂಭವಾಗುವ ಸ್ಪ್ರೇ ಮಾಡುತ್ತಿದ್ದರು. ಬಳಿಕ ಆತನನ್ನು ಹಿಂಬಾಲಿಸುತ್ತಿದ್ದರು. ಹಣ ಪಡೆದ ಗ್ರಾಹಕ ತುರಿಕೆ ಅನುಭವವಾಗಿ ವಾಹನ ನಿಲ್ಲಿಸಿ ನೀರಿನಿಂದ ತೊಳೆದುಕೊಳ್ಳಲು ಹೋಗುತ್ತಿದ್ದಂತೆ ಗ್ಯಾಂಗಿನ ಸದಸ್ಯರು ಹಣ ದೋಚಿ ಪರಾರಿಯಾಗುತ್ತಿದ್ದರು. ಇದೇ ರೀತಿ ಹಲವು ಕಡೆ ಗ್ರಾಹಕರ ಹಣ ದೋಚಿದ್ದರು.

ಸದ್ಯ ಬಂಧಿತ ಆರೋಪಿಗಳಿಂದ 5 ಲಕ್ಷ ಹಣ ರೂ. ಹಣ ಹಾಗೂ ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 2 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಓಜಿಕುಪ್ಪಂ ಗ್ಯಾಂಗ್ ಬಂಧನದಿಂದ ನಗರದ ದಕ್ಷಿಣ ವಿಭಾಗದಲ್ಲಿ ಸುಮಾರು 19 ಪ್ರಕರಣಗಳು ಬೆಳಕಿಗೆ ಬಂದಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

Share This Article
Leave a Comment

Leave a Reply

Your email address will not be published. Required fields are marked *