ಬೆಂಗಳೂರು: ನಗರದ ಮೆಜೆಸ್ಟಿಕ್ ರೈಲು ನಿಲ್ದಾಣದ ಹಾಗೂ ಬೋಪಾಲ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿ 72 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ.
ಎರಡು ಕಡೆ ಡಿಆರ್‌ಐ ಅಧಿಕಾರಿಗಳು ಒಟ್ಟು 72 ಕೋಟಿ ರೂ. ಮೌಲ್ಯದ 72 ಕೆ.ಜಿ ಮಾದಕ ವಸ್ತು ಸೀಜ್ ಮಾಡಲಾಗಿದೆ. ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಬಂದಿದ್ದ ಪ್ರಯಾಣಿಕನ ಬಳಿ 29.88 ಕೆ.ಜಿ ಸೀಜ್ ಮಾಡಲಾಗಿದೆ. ಬೋಪಾಲ್ ಜಂಕ್ಷನ್‌ನಲ್ಲಿ 24 ಕೆ.ಜಿ ಸೀಜ್ ಮಾಡಲಾಗಿದೆ.
ಬೆಂಗಳೂರಿನಿಂದ ಕೆಲ ಹುಡುಗರನ್ನು ಉಚಿತವಾಗಿ ಬ್ಯಾಂಕಾಂಕ್ ಟ್ರಿಫ್ ಕಳುಹಿಸಿ, ಬರುವಾಗ ಬ್ಯಾಗ್‌ನಲ್ಲಿ ಗಾಂಜಾ ತುಂಬಿ ಕಳಿಸುತ್ತಿದ್ದರು. ಹೀಗೆ ಮರಳಿ ಬರುತ್ತಿದ್ದ ಆರೋಪಿಗಳು ಏರ್‌ಪೋರ್ಟ್‌ಲ್ಲಿ ಬಚಾವ್ ಆಗಿ ರೈಲ್ವೆ ನಿಲ್ದಾಣದಲ್ಲಿ ಅರೆಸ್ಟ್ ಹಾಕಿದ್ದಾರೆ.