ಕೇದಾರನಾಥ| ಏರ್‌ಲಿಫ್ಟ್ ವೇಳೆ ಹೆಲಿಕಾಪ್ಟರ್ ಪತನ – ಅಧಿಕಾರಿಗಳು ಹೇಳಿದ್ದೇನು?

Public TV
1 Min Read

ಡೆಹ್ರಾಡೂನ್: ಕೇದಾರನಾಥದಲ್ಲಿ (Kedarnath) ಏರ್‌‌ಲಿಫ್ಟ್ ವೇಳೆ ಸೇನೆಯ ಎಮ್‍ಐ-17 ಹೆಲಿಕಾಪ್ಟರ್‌ (MI-17 Helicopter) ನಿಯಂತ್ರಣ ಕಳೆದುಕೊಳ್ಳಲು ಆರಂಭಿಸಿದ ಕಾರಣ ಪೈಲಟ್ ಖಾಸಗಿ ಹೆಲಿಕಾಪ್ಟರ್ ಅನ್ನು ಬೀಳಿಸಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇದಾರನಾಥನಲ್ಲಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ತಾಂತ್ರಿಕ ದೋಷ ಹೊಂದಿದ್ದ ಹೆಲಿಕಾಪ್ಟರ್ ಏರ್‌ಲಿಫ್ಟ್ ಮಾಡುವ ವೇಳೆ ಪತನಗೊಂಡಿದ್ದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ತಾಂತ್ರಿಕ ದೋಷದಿಂದ ಮೇ.24 ರಂದು ಕೇದಾರನಾಥದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಖಾಸಗಿ ಹೆಲಿಕಾಪ್ಟರ್ ಬಳಕೆಯಾಗದೇ ಉಳಿದಿತ್ತು. ದುರಸ್ತಿಗಾಗಿ ಸೇನೆಯ ಎಮ್‍ಐ-17 ಹೆಲಿಕಾಪ್ಟರ್ ಸಹಾಯದಿಂದ ಅದನ್ನು ಗೌಚಾರ್‌ಗೆ ಕೊಂಡೊಯ್ಯಲು ತೀರ್ಮಾನಿಸಲಾಗಿತ್ತು.

ಸೇನೆಯ ಹೆಲಿಕಾಪ್ಟರ್ ಸ್ವಲ್ಪ ದೂರ ಕ್ರಮಿಸಿದ ತಕ್ಷಣ, ಗಾಳಿಯ ಕಾರಣದಿಂದ ಸಮತೋಲನ ಕಳೆದುಕೊಳ್ಳಲು ಪ್ರಾರಂಭಿಸಿತು. ಅಪಾಯವನ್ನು ಗ್ರಹಿಸಿದ ಪೈಲಟ್ ಥಾರು ಕ್ಯಾಂಪ್ ಬಳಿ ಖಾಲಿ ಸ್ಥಳವನ್ನು ನೋಡಿ ಕಣಿವೆಯಲ್ಲಿ ಕೊಂಡೊಯ್ಯುತ್ತಿದ್ದ ಹೆಲಿಕಾಪ್ಟರ್‌ನ್ನು ಬೀಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 24 ರಂದು ಖಾಸಗಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವೇಳೆ ಯಾತ್ರಾರ್ಥಿಗಳು ಸೇರಿದಂತೆ ಎಲ್ಲಾ 7 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು.

Share This Article