– ಪುತ್ತಿಗೆ ಸುಗುಣೇಂದ್ರ ತೀರ್ಥರ ಸನ್ಯಾಸ ಜೀವನದ 50ನೇ ವರ್ಷ
ಉಡುಪಿ: ʻಉಡುಪಿ ಕೃಷ್ಣʼನಿಗೆ (Udupi Sri Krishna) ಪಾರ್ಥಸಾರಥಿ ಚಿನ್ನದ ರಥ (Golden Chariot) ಸಮರ್ಪಣೆಯಾಗಿದೆ. ಉತ್ಸವ ಪ್ರಿಯ ಕೃಷ್ಣನಿಗೆ ಇನ್ಮುಂದೆ ಕೃಷ್ಣಮಠದ ಒಳಗೂ ರಥೋತ್ಸವ ನಡೆಯುತ್ತದೆ.
ಮಳೆಗಾಲದಲ್ಲೂ ಗರ್ಭಗುಡಿಯ ಸುತ್ತುಪೌಳಿಯಲ್ಲಿ ರಥೋತ್ಸವ ನಡೆಸಬಹುದು. ಪುತ್ತಿಗೆ ಸುಗುಣೇಂದ್ರತೀರ್ಥ ಶ್ರೀಗಳ ಸನ್ಯಾಸ ಜೀವನದ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪಾರ್ಥಸಾರಥಿ ಸುವರ್ಣ ರಥ ಸಮರ್ಪಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು, ಮಂಗಳೂರಲ್ಲಿ ಕ್ರಿಸ್ಮಸ್ ಆಚರಿಸಿದ ಗ್ರೇಸ್ ಮಿನಿಸ್ಟ್ರಿ; ಬಡಮಕ್ಕಳ ಶಿಕ್ಷಣಕ್ಕೆ 15 ಲಕ್ಷ ರೂ. ದಾನ
ಮಂತ್ರಾಲಯದ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿ ಚಿನ್ನದ ರಥದ ಅನಾವರಣ ಮಾಡಿದರು. ಉಡುಪಿಯ ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯಲ್ಲಿ ರಘು ಪತ್ನಿ ಬರ್ತ್ಡೇ; ಸರ್ಪ್ರೈಸ್ಗೆ ಕಣ್ಣೀರಿಟ್ಟ ರಘು



