ಹಾಸನ: ಬಟ್ಟೆ ಆಫರ್‌ಗೆ (Cloth Offer) ಮುಗಿಬಿದ್ದ ಜನರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಪ್ರಹಾರ (Lathi Charge) ನಡೆಸಿದ ಘಟನೆ ಹಾಸನ (Hassan) ನಗರದ ಉದಯಗಿರಿ (Udayagiri) ಬಡಾವಣೆಯಲ್ಲಿ ನಡೆದಿದೆ.
ಲಕ್ಷಿ ಬ್ಯಾಡ್ಮಿಂಟನ್ ಅಕಾಡೆಮಿ ಕಟ್ಟಡದಲ್ಲಿ ಬಟ್ಟೆ ಖರೀದಿಗೆ ಆಫರ್ ನೀಡಲಾಗಿತ್ತು. ಈ ಹಿನ್ನೆಲೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಖರೀದಿಗೆ ಬಂದಿದ್ದರು. ಬಟ್ಟೆ ಖರೀದಿಸಲು ನೂಕುನುಗ್ಗಲು ಹೆಚ್ಚಾದ ಹಿನ್ನೆಲೆ ಖರೀದಿಗೆ ಬಂದಿದ್ದವರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: TVK Vijay Rally Stampede | ದುರಂತದಲ್ಲಿ 2 ವರ್ಷದ ಕಂದಮ್ಮ ಬಲಿ – ಕುಟುಂಬದಲ್ಲಿ ಮುಗಿಲು ಮುಟ್ಟಿದ ಆಕ್ರಂದನ
ಅರುಣ್ ಅಡ್ಡ ಮೆನ್ಸ್ ವೇರ್‌ನವರು ಈ ಬಿಗ್ ಆಫರ್ ನೀಡಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಖರೀದಿಗೆ ನೂಕುನುಗ್ಗಲು ಉಂಟಾದ ಹಿನ್ನೆಲೆ ಪೊಲೀಸರು ಖರೀದಿಗೆ ಬಂದಿದ್ದ ಯುವಕರಿಗೆ ಲಾಠಿ ರುಚಿ ತೋರಿಸಿದ್ದಾರೆ. ಲಾಠಿ ಚಾರ್ಜ್ ನಡೆಸಿದ ಪರಿಣಾಮ ಯುವಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಸುಧಾಮೂರ್ತಿಗೆ ಕರೆ ಮಾಡಿ ವಂಚನೆಗೆ ಯತ್ನಿಸಿದ್ದ ಸೈಬರ್ ಕಳ್ಳರು!