ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು (Lover) ಲಾಡ್ಜ್‌ಗೆ ಕರೆಸಿ ಹತ್ಯೆಗೈದು ಬಳಿಕ ಪೊಲೀಸರಿಗೆ ಶರಣಾದ ಘಟನೆ ಒಡಿಶಾದಲ್ಲಿ (Odisha) ನಡೆದಿದೆ.
ಹತ್ಯೆಯಾದ ಯುವತಿಯನ್ನು ಪ್ರಿಯಾ ಕುಮಾರಿ ಮೊಹರಾನ ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಲಂಜಿಪಲ್ಲಿ ನಿವಾಸಿ ಅಭಯ್ ಕುಮಾರ್ ಮೊಹರಾನ (24) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಪತಿಯಿಂದ ದೂರವಿದ್ದ ತಾಯಿ, ಮಗಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು
ಆರೋಪಿ ಮಂಗಳವಾರ ಬೆಳಿಗ್ಗೆ 11:30ರ ಸುಮಾರಿಗೆ ಲಾಡ್ಜ್‌ಗೆ ಬಂದಿದ್ದ. ಇದಾದ ಸ್ವಲ್ಪ ಸಮಯದ ಬಳಿಕ ಪ್ರಿಯಾ ಬಂದಿದ್ದಳು. ಆಕೆಯೊಂದಿಗೆ ಸ್ವಲ್ಪ ಸಮಯ ಕಳೆದ ಬಳಿಕ, 3 ಗಂಟೆ ಸುಮಾರಿಗೆ ಆಕೆಯ ಕುತ್ತಿಗೆ, ಬೆನ್ನು, ಎದೆ ಮತ್ತು ಹೊಟ್ಟೆಗೆ 20 ಬಾರಿ ಇರಿದು ಕೊಂದಿದ್ದಾನೆ. ಹತ್ಯೆಯ ಬಳಿಕ ಆರೋಪಿ ತನ್ನ ಕೈಯಲ್ಲಿ ಆಗಿದ್ದ ಗಾಯಕ್ಕೆ ಚಿಕಿತ್ಸೆಗಾಗಿ ಸಿಟಿ ಆಸ್ಪತ್ರೆಗೆ ಹೋಗಿದ್ದ. ಅಲ್ಲಿಂದ ಗೋಸಾನಿನುವಾಗಾಂವ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಪ್ರಿಯಾ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಲು ನಿರ್ಧರಿಸಿದ್ದಕ್ಕೆ ಆರೋಪಿ ಕೋಪಗೊಂಡಿದ್ದ. ಇದರಿಂದ ಸಂಚು ರೂಪಿಸಿ, ರೂಮ್ ಬುಕ್ ಮಾಡಿ, ಕೊಲ್ಲಲು ಮೊದಲೇ ಚಾಕು ಖರೀದಿಸಿ ತಂದಿದ್ದ. ಕೊಲೆಯ ಬಳಿಕ ತನ್ನ ಎರಡೂ ಮೊಬೈಲ್‌ಗಳನ್ನು ಬಿಜಿಪುರ ಪ್ರದೇಶದ ಬಳಿಯ ಕೊಳದಲ್ಲಿ ಎಸೆದಿದ್ದ ಎಂದು ತಿಳಿದುಬಂದಿದೆ.
ಹತ್ಯೆಯಾದ ಯುವತಿ ಇಲ್ಲಿನ ಖಾಸಗಿ ಆಸ್ಪತ್ರೆಯ ಪ್ರಯೋಗಾಲಯದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಆರೋಪಿ ಕಳೆದ ಮೂರು ತಿಂಗಳ ಹಿಂದೆ ಕೆಲಸ ತ್ಯೆಜಿಸಿ, ಮನೆಯಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 11ನೇ ಕ್ಲಾಸ್ ವಿದ್ಯಾರ್ಥಿಯ ಜೊತೆ 5 ಸ್ಟಾರ್ ಹೋಟೆಲಿನಲ್ಲಿ ಸೆಕ್ಸ್- ಮುಂಬೈ ಶಿಕ್ಷಕಿ ಅರೆಸ್ಟ್