ತಮಾಷೆಗಾಗಿ ಹಾಸ್ಟೆಲ್‌ನಲ್ಲಿ ಸ್ನೇಹಿತರಿಂದ ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಗಮ್ – 7 ಮಕ್ಕಳಿಗೆ ಮುಂದುವರಿದ ಚಿಕಿತ್ಸೆ

Public TV
1 Min Read

ಭುವನೇಶ್ವರ: ಒಡಿಶಾದ (Odisha) ಕಂಧಮಾಲ್ ಜಿಲ್ಲೆಯಲ್ಲಿ ಪ್ರಾಂಕ್ (Prank) ಮಾಡಲು 8 ಹಾಸ್ಟೆಲ್ ವಿದ್ಯಾರ್ಥಿಗಳ ಕಣ್ಣುಗಳಿಗೆ ಉಳಿದ ವಿದ್ಯಾರ್ಥಿಗಳು ಫೆವಿಕ್ವಿಕ್ (Fevikwik) ಗಮ್ ಹಾಕಿರುವುದಾಗಿ ತನಿಖೆಯಲ್ಲಿ ಬಯಲಾಗಿದೆ.

ಹೌದು, ಕಂಧಮಾಲ್‌ನ ಸಲಗುಡದಲ್ಲಿರುವ ಸೇವಾಶ್ರಮ ಶಾಲೆಯಲ್ಲಿ 3, 4 ಮತ್ತು 5ನೇ ತರಗತಿಯ 8 ವಿದ್ಯಾರ್ಥಿಗಳು ರಾತ್ರಿ ಹಾಸ್ಟೆಲ್‌ನಲ್ಲಿ ಮಲಗಿದ್ದಾಗ ಕೆಲವು ವಿದ್ಯಾರ್ಥಿಗಳು ಅವರ ಕಣ್ಣಿಗೆ ಅಂಟು ಹಾಕಿದ್ದಾರೆ. ಮಕ್ಕಳು ನಿದ್ರೆಯಿಂದ ಎದ್ದಾಗ ಅವರಿಗೆ ಕಣ್ಣುಗಳನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ರಾತ್ರಿ ಮಲಗಿದ್ದಾಗ ಕಣ್ಣಿಗೆ ಫೆವಿಕ್ವಿಕ್‌ ಅಂಟು – ಬೆಳಗ್ಗೆ ಕಣ್ಣು ತೆರೆಯಲಾಗದೇ ಒದ್ದಾಡುತ್ತಿದ್ದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಬಳಿಕ ವಿದ್ಯಾರ್ಥಿಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಫುಲ್ಬಾನಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಮ್ ಹಾಕಿರುವುದರಿಂದ ಮಕ್ಕಳ ಕಣ್ಣಿಗೆ ಹಾನಿಯುಂಟಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿರುವುದರಿಂದ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಇದೀಗ ಒಬ್ಬ ವಿದ್ಯಾರ್ಥಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇತರ ಏಳು ಮಂದಿಯನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿರ್ಲಕ್ಷ್ಯದ ಕಾರಣದಿಂದ ಕಂಧಮಲ್ ಜಿಲ್ಲಾಡಳಿತವು ಶಾಲೆಯ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹು ಅವರನ್ನು ಅಮಾನತುಗೊಳಿಸಿತ್ತು. ಇದೀಗ ತನಿಖೆಯಲ್ಲಿ ತಮಾಷೆಗಾಗಿ ಕೆಲವು ವಿದ್ಯಾರ್ಥಿಗಳು 8 ಮಕ್ಕಳ ಕಣ್ಣಿಗೆ ಫೆವಿಕ್ವಿಕ್ ಗಮ್ ಹಾಕಿರುವುದು ಬೆಳಕಿಗೆ ಬಂದಿದೆ.

Share This Article