7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ

Public TV
2 Min Read

ಭುವನೇಶ್ವರ: ವ್ಯಕ್ತಿಯೊಬ್ಬ ತಾನೂ ವೈದ್ಯ ಎಂದು ಹೇಳಿ ಏಳು ರಾಜ್ಯಗಳಲ್ಲಿ ಒಟ್ಟು 14 ಮಹಿಳೆಯರನ್ನು ಮದುವೆಯಾಗಿ ವಂಚಿಸಿದ್ದನು. ಈ ಖತರ್ನಾಕ್ ನಕಲಿ ವೈದ್ಯನನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಬಿಧು ಪ್ರಕಾಶ್ ಸ್ವೈನ್(54) ಅಲಿಯಾಸ್ ರಮೇಶ್ ಸ್ವೈನ್ ಆರೋಪಿಯಾಗಿದ್ದಾನೆ. ಈತ ಒಡಿಶಾದ ಕೇಂದ್ರಪ್ಪ ಜಿಲ್ಲೆಯ ನಿವಾಸಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್ ಸೈಟ್‍ಗಳಲ್ಲಿ ತಾನು ವೈದ್ಯ ಎಂದು ಹೇಳಿಕೊಂಡು 14 ಮಹಿಳೆಯರನ್ನು ಮದುವೆಯಾಗಿದ್ದಾನೆ. ಸರಿಸುಮಾರು 7 ರಾಜ್ಯಗಳ ಮಹಿಳೆಯರಿಗೆ ಮೋಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕೆಂಪುಕೋಟೆ ಮೇಲೆ ಸಿಖ್‌ ಬಾವುಟ ಹಾರಿಸಿದ್ದ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವು

ಪಂಜಾಬ್, ದೆಹಲಿ, ಅಸ್ಸಾಂ, ಜಾರ್ಖಂಡ್, ಒಡಿಶಾದ ಮಧ್ಯವಯಸ್ಕ ಮಹಿಳೆಯರು ಮತ್ತು ವಿಚ್ಛೇದಿತರನ್ನು ಸ್ವೈನ್ ಟಾರ್ಗೆಟಾಗಿದ್ದರು. ಕೆಲವು ವೈವಾಹಿಕ ವೆಬ್‍ಸೈಟ್‍ಗಳ ಮೂಲಕ ಮಹಿಳೆಯರನ್ನು ಸಂಪರ್ಕಿಸಿ ತಾನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೆಲಸ ಮಾಡುವ ವೈದ್ಯ ಎಂದು ಸುಳ್ಳು ಹೇಳಿ ಬಲೆ ಬೀಸುತ್ತಿದ್ದನು. ಮದುವೆಯಾಗುವ ಮಹಿಳೆಯರ ಬಳಿ ಇರುವ ಹಣ ಪಡೆಯಲು ಸಂಚು ರೂಪಿಸಿ ವಿವಾಹ ವಾಗುತ್ತಿದ್ದನು. ಮದುವೆಯ ನಂತರ ಕೆಲವು ದಿನಗಳ ಕಾಲ ಅವರೊಂದಿಗೆ ಇರುತ್ತಿದ್ದ. ನಂತರ ಭುವನೇಶ್ವರಕ್ಕೆ ಯಾವುದೋ ಕೆಲಸದ ನಿಮಿತ್ತ ಹೋಗುವ ನೆಪದಲ್ಲಿ ಆ ಹೆಣ್ಣಮಕ್ಕಳನ್ನು ಅವರ ಪೋಷಕರ ಬಳಿ ಬಿಟ್ಟು ಹೋಗುತ್ತಿದ್ದರು ದಾಶ್ ಹೇಳಿದ್ದಾರೆ. ಎಂದು ಭುವನೇಶ್ವರ ಡಿಸಿಪಿ ಉಮಾಶಂಕರ್ ದಾಶ್ ಹೇಳಿದ್ದಾರೆ. ಇದನ್ನೂ ಓದಿ: ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ನಿಧನ

ಸ್ವೇನ್ ವಿವಾಹವಾದವರಲ್ಲಿ ಸುಪ್ರೀಂ ಕೋರ್ಟ್‍ನ ವಕೀಲರು, ಹಿರಿಯ ಕೇಂದ್ರ ಸಶಸ್ತ್ರ ಪೆÇಲೀಸ್ ಪಡೆಗಳ ಅಧಿಕಾರಿಯೂ ಸೇರಿದ್ದಾರೆ. 10 ಲಕ್ಷದ ಆಸೆಗಾಗಿ 2018ರಲ್ಲಿ ಪಂಜಾಬ್‍ನ ಅಂPಈ ಅಧಿಕಾರಿಯನ್ನು ವಿವಾಹವಾದರು. ಬಳಿಕ ಗುರುದ್ವಾರಕ್ಕೆ ಆಸ್ಪತ್ರೆ ಮಂಜೂರು ಮಾಡುವುದಾಗಿ ಹೇಳಿ 11 ಲಕ್ಷ ರೂ.ಗಳನ್ನು ವಂಚಿಸಿದ್ದನು. ಸ್ವೇನ್ ಐದು ಮಕ್ಕಳ ತಂದೆಯಾಗಿದ್ದು, 1982 ರಲ್ಲಿ ಮೊದಲ ಬಾರಿಗೆ ವಿವಾಹವಾದರು. ನಂತರ 2002 ರಲ್ಲಿ ಮತ್ತೊಂದು ವಿವಾಹವಾದರು. 2002 ರಿಂದ 2020ರ ನಡುವೆ ಅವರು ಹಲವಾರು ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ಅವರನ್ನು ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ.

ಜುಲೈ 2021ರಲ್ಲಿ ದೆಹಲಿ ಮೂಲದ ಶಿಕ್ಷಕಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಸ್ವೈನ್ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆ ತನ್ನ ದೂರಿನಲ್ಲಿ, ಸ್ವೈನ್ ತನ್ನನ್ನು ನವದೆಹಲಿಯ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆಯಾಗಿದ್ದಾನೆ ಎಂದು ಹೇಳಿದ್ದಾರೆ. ಮಹಿಳೆ ನೀಡಿದ ಭುವನೇಶ್ವರದ ಖಂಡಗಿರಿ ಪ್ರದೇಶದ ಬಾಡಿಗೆ ವಸತಿಯಿಂದ ಬಂಧಿಸಲಾಯಿತು. ಸೆಕ್ಷನ್ 498 (ಎ), 419, 468, 471 ಮತ್ತು 494 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿವಿಧ ಮ್ಯಾಟ್ರಿಮೋನಿಯಲ್ ಸೈಟ್‍ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಇನ್ನೂ 13 ಮಹಿಳೆಯರನ್ನು ಆತ ವಂಚಿಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *