ಮುರುಘಾಶ್ರೀಗಳಿಗೆ ಮಕ್ಕಳ ಅಶ್ಲೀಲ ವೀಡಿಯೋ ನೋಡೋ ಚಟವಿತ್ತು – ಒಡನಾಡಿ ಆರೋಪ

Public TV
1 Min Read

ಮೈಸೂರು: ಚಿತ್ರದುರ್ಗ ಮುರುಘಾಮಠದ (Murugha Mutt) ಶಿವಮೂರ್ತಿ ಶರಣರ (Shivamurthy Murugha Sharanaru) ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ಸತ್ಯ ಹೊರ ಬಿದ್ದಿದೆ.

ಮುರುಘಾ ಮಠದ ವಸತಿ ಶಾಲೆಯಲ್ಲಿದ್ದ (Murugha Mutt Residential School) ಕೆಲ ಹೆಣ್ಣು ಮಕ್ಕಳ ಅಶ್ಲೀಲ ವೀಡಿಯೋ (Video) ಸಹ ಮಾಡಲಾಗಿದ್ದು ಅದನ್ನು ಸ್ವಾಮೀಜಿಗಳಿಗೆ ಮಾರಾಟ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಸೊಸೆಯಿಂದಲೇ ಅತ್ತೆಯ ಕೊಲೆ

ಈ ಕುರಿತು ಮಾತನಾಡಿರುವ ಒಡನಾಡಿ ಸಂಸ್ಥೆಯ (Odanadi Seva Samsthe) ಮುಖ್ಯಸ್ಥ ಪರಶುರಾಮ್, ಮರುಘಾ ಮಠದ ವಸತಿ ಶಾಲೆಯಲ್ಲಿದ್ದ ಕೆಲ ಮಕ್ಕಳ ಬೆತ್ತಲೆ ವೀಡಿಯೋ ಮಾಡಿ ಸ್ವಾಮೀಜಿಗೆ ಮಾರಾಟ ಮಾಡಿದ್ದಾರೆ. ವೀಡಿಯೋ ಮಾಡುವ ವಿಚಾರದಲ್ಲಿ ಸ್ವಾಮೀಜಿಯ ಪಾತ್ರವೂ ಇದೆ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೇ ಈ ವಿಚಾರ ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಬಿಜೆಪಿ ಕಾರ್ಪೊರೇಟರ್ ಪತಿ ಮೇಲೆ ಪೌರಕಾರ್ಮಿಕರಿಂದ ಹಲ್ಲೆ

ವೀಡಿಯೋ ಮಾಡಿದವರು, ವೀಡಿಯೋ ಮಾರಾಟ ಮಾಡಿದವರ ಬಂಧನವೂ ಆಗಬೇಕು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ದೊಡ್ಡ ಪಟ್ಟಿಯೇ ಇದೆ. ಇನ್ನೂ ಅನೇಕರು ಈ ಬಗ್ಗೆ ದೂರು ಕೊಡುವುದು ನಿಶ್ಚಿತ. ಮಠದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಇಬ್ಬರು ಅಪ್ರಾಪ್ತ ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ಶೋಷಣೆ ಆಗಿದೆ ಎಂದು ಆರೋಪಿಸಿದ್ದಾರೆ.

ನಾವು ನಂಬಿದ್ದ ವ್ಯಕ್ತಿ ಇಷ್ಟು ಕ್ರೂರವಾಗಿ ವರ್ತಿಸಿದ್ದಾರಲ್ಲ ಅನ್ನೋದು ತುಂಬಾ ದುಃಖವಾಗಿದೆ. ಇಷ್ಟಾದರೂ ಸರ್ಕಾರ (Government Of Karnataka) ವಿಶೇಷ ತನಿಖಾ ದಳ (Speical Investigation Team) ನೇಮಿಸಿಲ್ಲ. ಈ ಪ್ರಕರಣದ ಹಿಂದಿರುವ ಎಲ್ಲ ಮುಖಗಳು ಆಚೆ ಬರಬೇಕಾದರೆ ರಾಷ್ಟ್ರಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *