ವಿದ್ಯುತ್ ಸಂಪರ್ಕಕ್ಕೆ ಓಸಿ ವಿನಾಯ್ತಿ – ಇಂದೇ ನಿರ್ಧಾರ?

Public TV
2 Min Read

– ಸಿಎಂ, ಸಿಎಸ್‌ ನೇತೃತ್ವದಲ್ಲಿಂದು ಮಹತ್ವದ ಸಭೆ
– 3 ಲಕ್ಷ ಮನೆಗಳಿಗೆ ಸಿಗಲಿದೆಯಾ ವಿದ್ಯುತ್‌ ಸಂಪರ್ಕ?

ಬೆಂಗಳೂರು: ಸ್ವಾಧೀನಾನುಭವ ಪತ್ರ (Occupancy Certificates) ಇಲ್ಲದೇ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಇಲ್ಲ. ಹೀಗಾಗಿ ಓಸಿ ಇಲ್ಲದೇ ವಿದ್ಯುತ್ ಸಂಪರ್ಕ ನೀಡಲು ಕ್ಯಾಬಿನೆಟ್‌ನಲ್ಲಿ ಚರ್ಚೆ ವಿಷಯ ಆಗಿತ್ತು. ಆದ್ರೆ ಈವರೆಗೆ ಯಾವುದೇ ಬೆಳವಣಿಗೆ ನಡೆದಿರಲಿಲ್ಲ. ಹೀಗಾಗಿ ವಿದ್ಯುತ್ ಸಂಪರ್ಕಕ್ಕಾಗಿ ಓಸಿ ವಿನಾಯಿತಿ ನೀಡಲು ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಸಿಎಂ ನೇತೃತ್ವದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಲಕ್ಷಾಂತರ ಮನೆಗಳಿಗೆ ವಿದ್ಯುತ್ ಸಂಪರ್ಕ (Electricity connection) ನೀಡುವ ಸಲುವಾಗಿ ಓಸಿ ವಿನಾಯಿತಿ ಬಗ್ಗೆ ಚರ್ಚೆ ನಡೆಯಲಿದೆ. ಸಾಧಕ ಭಾಧಕಗಳ ಬಗ್ಗೆ ಚರ್ಚೆ ಆಗಿ ವಿನಾಯಿತಿ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.

Occupancy Certificate

ಇನ್ನೂ ಓಸಿಯಿಂದ ಒನ್ ಟೈಂ ರಿಲ್ಯಾಕ್ಸೇಷನ್ ಬೆಸ್ಕಾಂ ವ್ಯಾಪ್ತಿಯಲ್ಲಿ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಗಲಿದೆ. ‌ಬೆಂಗಳೂರಿನಲ್ಲಿ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. 53 ಸಾವಿರ ಅರ್ಜಿಯಿಂದ 3 ಲಕ್ಷಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಸಿಗಲಿದೆ. ಇದನ್ನೂ ಓದಿ:  ʻಆಪರೇಷನ್‌ ಸಿಂಧೂರʼ ಒಪ್ಪಿಕೊಂಡ ಪಾಕ್‌ ನಾಯಕ; ದಾಳಿಯಿಂದ ಹಾನಿಗೊಳಗಾದವರಿಗೆ ಪಂದ್ಯದ ಹಣ ನಿಡೋದಾಗಿ ಘೋಷಣೆ

ಒಂದೇ ಬಿಲ್ಡಿಂಗ್ ನಲ್ಲಿ 4 ರಿಂದ 5 ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆಯಾಗಿದ್ದು ಅಸ್ತಿತ್ವದಲ್ಲಿ ಇರುವ ಕಟ್ಟಡಗಳಿಂದ ವಿದ್ಯುತ್ ಸಂಪರ್ಕಕ್ಕಾಗಿ 53 ಸಾವಿರ ಅರ್ಜಿ ಸಲ್ಲಿಕೆ ಆಗಿದೆ. ಕಮರ್ಷಿಯಲ್ ಮತ್ತು ರೆನ್ಸಿಡೆನ್ಷಿಯಲ್ ಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿಸಲ್ಲಿಕೆಯಾಗಿದ್ದು. 30×40 ಚದರ ಅಡಿ ನಿವೇಶನದ ವಿದ್ಯುತ್ ಸಂಪರ್ಕಕ್ಕೆ 33 ಸಾವಿ ಅರ್ಜಿ ಸಲ್ಲಿಕೆಯಾಗಿದೆ. 1,200 ಚದರ ಅಡಿ ನಿವೇಶನಗಳಿಂದ 25 ಸಾವಿರ ಅರ್ಜಿಗೆ ರಿಲ್ಯಾಕ್ಸೇಷನ್ ಸಿಗಲಿದೆ. ಇದನ್ನೂ ಓದಿ: ವಿಜಯ್‌ ಅವರದ್ದು ಏನೂ ತಪ್ಪಿಲ್ಲ, ಪೊಲೀಸ್‌ ಇಂಟೆಲಿಜೆನ್ಸ್‌ ವಿಫಲವಾಗಿದೆ: ಅಣ್ಣಾಮಲೈ ಆರೋಪ

ಒಟ್ಟಾರೆ ಓಸಿ ವಿದ್ಯುತ್ ಸಂಪರ್ಕಕ್ಕಾಗಿ ಲಕ್ಷಾಂತರ ಅರ್ಜಿಗಳು ಸಲ್ಲಿಕೆ ಆಗಿವೆ. ಸರ್ಕಾರ ಸಭೆ ಮಾಡಿ ವಿದ್ಯುತ್ ಸಂಪರ್ಕಕ್ಕಾಗಿ ವಿನಾಯಿತಿ ಕೊಡುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

Share This Article