ರಾಮನಗರದ ‘ನಮೋ’ ವಾಟ್ಸಪ್ ಗ್ರೂಪ್‍ನಲ್ಲಿ ಅಶ್ಲೀಲ ವಿಡಿಯೋ ಶೇರ್

Public TV
1 Min Read

ರಾಮನಗರ: ನರೇಂದ್ರ ಮೋದಿ ಸೇನೆ ರಾಮನಗರ ವಾಟ್ಸಪ್ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳನ್ನು ಶೇರ್ ಮಾಡಲಾಗಿದೆ.

ಇತ್ತೀಚೆಗೆ ರಾಜ್ಯದ 30 ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಹಾಗೂ ನರೇಂದ್ರ ಮೋದಿಯವರ ಕೆಲಸಗಳನ್ನು ಸಾರ್ವಜನಿಕರಿಗೆ ತಿಳಿಸುವ ಹಾಗೂ ಸಂಘಟನೆ ದೃಷ್ಟಿಯಿಂದ ವಾಟ್ಸಪ್ ಗ್ರೂಪ್‍ಗಳನ್ನು ಮಾಡಲಾಗಿದೆ. ಆದರೆ ಸೋಮವಾರ ನಮೋ ಸೇನೆ ರಾಮನಗರ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಿಬಿಡಲಾಗಿದೆ.

ಅಶ್ಲೀಲ ವಿಡಿಯೋ ನೋಡಿದ ಗ್ರೂಪಿನ ಸದಸ್ಯರು ವಿಡಿಯೋ ಶೇರ್ ಮಾಡಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಆತನನ್ನು ಗ್ರೂಪಿನಿಂದ ಹೊರಹಾಕುವಂತೆ ತಿಳಿಸ್ತಿದ್ದಂತೆ ಗ್ರೂಪ್ ಅಡ್ಮಿನ್ ಆತನನ್ನು ಗ್ರೂಪಿನಿಂದ ತೆಗೆದಿದ್ದಾರೆ. ಈ ನಮೋ ಸೇನೆ ರಾಮನಗರ ವಾಟ್ಸಪ್ ಗ್ರೂಪಿನಲ್ಲಿ ಬಿಜೆಪಿ ಕಾರ್ಯಕರ್ತರು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು ಸಹ ಇದ್ದು, ಅಶ್ಲೀಲ ವಿಡಿಯೋ ಶೇರ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರೂಪ್‍ನ ಅಡ್ಮಿನ್ ಬ್ಯಾಡರಹಳ್ಳಿ ಕುಮಾರ್ ಈ ಬಗ್ಗೆ ಮಾತನಾಡಿ ಆತ ಅನ್ಯ ಕೋಮಿನವನು ಸೋಮವಾರ ಗ್ರೂಪ್‍ಗೆ ಬಂದಿದ್ದು ರಾತ್ರಿ ಈ ರೀತಿಯ ವಿಡಿಯೋಗಳನ್ನು ಹಾಕಿದ್ದಾನೆ. ಈ ರೀತಿ ವಿಡಿಯೋ ಶೇರ್ ಮಾಡೋದಕ್ಕೆ ಬೇರೆ ಗ್ರೂಪ್‍ಗಳಿವೆ ಅದರಲ್ಲಿ ಶೇರ್ ಮಾಡ್ಕೊ ಎಂದೇಳಿ ಗ್ರೂಪ್‍ನಿಂದ ಹೊರ ಹಾಕಿರುವುದಾಗಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *