New Delhi| ಡಿಜಿಟಲ್ ಜಾಹೀರಾತು ಫಲಕದಲ್ಲಿ ಪ್ರಸಾರವಾಯ್ತು ಸೆಕ್ಸ್ ವೀಡಿಯೋ – ಮುಂದೇನಾಯ್ತು?

By
1 Min Read

ದೆಹಲಿ: ರಾಷ್ಟ್ರ ರಾಜಧಾನಿಯ (Delhi) ಅತ್ಯಂತ ಜನನಿಬಿಡ ಮಾರುಕಟ್ಟೆಗಳಲ್ಲಿ ಒಂದಾದ ದೆಹಲಿಯ ಕನ್ನಾಟ್ ಪ್ಲೇಸ್‍ನ ಡಿಜಿಟಲ್ ಜಾಹೀರಾತು ಫಲಕದಲ್ಲಿ (Digital  Advertisement Board) ಸೆಕ್ಸ್ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ.

ಮಾರುಕಟ್ಟೆಯ ಹೆಚ್-ಬ್ಲಾಕ್‍ನಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಜಾಹೀರಾತು ಫಲಕವನ್ನು ವೀಡಿಯೋ ಮಾಡಿಕೊಂಡು ಪೋಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಪ್ಲೇ ಆಗಿದ್ದ ಕ್ಲಿಪ್‍ನ್ನು ನವದೆಹಲಿ ಮುನ್ಸಿಪಲ್ ಅಧಿಕಾರಿಗಳ ಸಹಾಯದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು ಫಲಕವು ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿದೆ. ಇದರೊಂದಿಗೆ ಫೈರ್‍ವಾಲ್ ಮತ್ತು ಆಂಟಿವೈರಸ್‍ನೊಂದಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರುವ ಸರ್ವರ್‍ನಿಂದ ನಿಯಂತ್ರಿಸಲ್ಪಡುತ್ತವೆ. ಆದರೂ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಜಾಹೀರಾತು ಫಲಕವನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ರೀತಿಯ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಬಿಹಾರದಲ್ಲಿ ಇದೇ ರೀತಿಯ ಘಟನೆ ಸಂಭವಿಸಿದ್ದು, ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಜಾಹೀರಾತುಗಳಿಗಾಗಿ ಡಿಸ್ಪ್ಲೇಯಲ್ಲಿ ಸೆಕ್ಸ್ ವೀಡಿಯೋ ಕ್ಲಿಪ್‍ನ್ನು ಪ್ಲೇ ಮಾಡಲಾಗಿತ್ತು. ಬಳಿಕ ರೈಲ್ವೆ ರಕ್ಷಣಾ ಪಡೆ ಮಧ್ಯ ಪ್ರವೇಶಿಸಿ ದೃಶ್ಯಾವಳಿಗಳನ್ನು ನಿಲ್ಲಿಸಿತ್ತು.

Share This Article