ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು!

Public TV
1 Min Read

– ಡಿಕೆಶಿ ಬೆಂಬಲಿಗರು ಅಂಟಿಸಿದ್ರಾ..?

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಪೋಸ್ಟರ್ ವಾರ್ ಶುರುವಾದಂತಿದೆ. ಬೆಂಗಳೂರಿನ ಸದಾಶಿವನಗರದ ರಮೇಶ್ ಜಾರಕಿಹೊಳಿ (Ramesh Jarakiholi) ನಿವಾಸಕ್ಕೆ ಅವಾಚ್ಯ ಪದ ಬಳಕೆ ಮಾಡಿರುವ ಪೋಸ್ಟರ್ ಗಳನ್ನು ಕಿಡಿಗೇಡಿಗಳು ಅಂಟಿಸಿ ಹೋಗಿದ್ದಾರೆ.

ಪೋಸ್ಟರ್ ನಲ್ಲಿ ಏಕವಚನದಲ್ಲಿ ನಿಂದನೆ ಜೊತೆಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಇದೇ ನಿನ್ನ ಸಂಸ್ಕೃತಿ ಎಂದು ಪದ ಬಳಸಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಕೂಡಲೇ ಅಂಟಿಸಿದ್ದ ಪೋಸ್ಟರ್ ತೆರವುಮಾಡಿದ್ದಾರೆ. ಈ ಪೋಸ್ಟರ್ ಬಗ್ಗೆ ಇದೀಗ ಭಾರೀ ಚರ್ಚೆ ಶುರುವಾಗಿದೆ.

ಸೋಮವಾರ ಡಿಸಿಎಂ ಡಿಕೆಶಿ (DK Shivakumar) ವಿರುದ್ಧ ರಮೇಶ್ ಜಾರಕಿಜೊಳಿ ಸುದ್ದಿಗೋಷ್ಠಿ ನಡೆಸಿ ಡಿಕೆ ಹೆದರು ಪುಕ್ಕಲ, ಮೋಸಗಾರ ಎಂದು ಜರೆದಿದ್ದರು. ರಾಜ್ಯ ಸರ್ಕಾರದ ಪತನಕ್ಕೆ ಬಿಜೆಪಿ(BJP) ಸ್ಕೆಚ್ ಹಾಕಿಲ್ಲ. ಆಪರೇಷನ್ ಕಮಲವನ್ನು ನಾವು ಮಾಡ್ತಿಲ್ಲ. ಸುಳ್ಳು ಗ್ಯಾರಂಟಿ ಕೊಟ್ಟಿದ್ದನ್ನ ಈಡೇರಿಸಲು ಆಗದ ಕಾರಣ ಆಪರೇಷನ್ ಕಮಲ ಮಾಡುತ್ತಿದ್ದಾರೆ ಅಂತಾ ಡಿಕೆ ಗ್ಯಾಂಗ್ ಹೇಳ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದರು. 2019ರಲ್ಲಿ ಅನಿವಾರ್ಯ ಇತ್ತು ಆಪರೇಷನ್ ಮಾಡಿದ್ವಿ. ಅಂದು ಡಿಕೆಶಿಯ ಸರ್ವಾಧಿಕಾರಿ ಧೋರಣೆ ಮತ್ತು ಸೊಕ್ಕಿನಿಂದ ಸರ್ಕಾರವನ್ನು ಬೀಳಿಸಬೇಕಾಯಿತು ಅಂದಿದ್ದರು. ಇದನ್ನೂ ಓದಿ: ನಾನು ಯಾವತ್ತಿದ್ದರೂ ಸಿದ್ದರಾಮಯ್ಯ ಪರ, ಸಚಿವರ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟಿದ್ದು: ಜಮೀರ್ ಅಹ್ಮದ್

ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ (Congress) ಕಾರ್ಯಕರ್ತರು, ಡಿಕೆ ಬೆಂಬಲಿಗರು ಪೋಸ್ಟರ್ ಅಂಟಿಸಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್