ದರ್ಶನ್ ಫ್ಯಾನ್ಸ್ (Darshan Fans) ಅಶ್ಲೀಲ ಮೆಸೇಜ್‍ಗಳ ವಿರುದ್ಧ ನಟಿ ರಮ್ಯಾ (Actress Ramya) ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.
ದೂರು ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರೇಣುಕಾಸ್ವಾಮಿ ಹತ್ಯೆ ಕೇಸ್ (Renukaswamy Case) ವಿಚಾರವಾಗಿ ಸುಪ್ರೀಂ ಕೋರ್ಟ್‍ನಲ್ಲಿ ನ್ಯಾಯಾ ಸಿಗುತ್ತೆ ಎಂದು ಸ್ಟೇಟಸ್ ಹಾಕಿದ್ದೆ. ಇದಕ್ಕೆ ನನಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದರು. ಇವರಿಗೂ ರೇಣುಕಾಸ್ವಾಮಿಗೂ ಎನು ವ್ಯತ್ಯಾಸ? ಹಾಗಾಗಿ ನಾನು ದೂರು ಕೊಟ್ಟಿದ್ದೇನೆ. ದೂರನ್ನು ಕಮಿಷನರ್ ಸ್ವೀಕರಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
ಕಮಿಷನರ್ ಕಚೇರಿಯಲ್ಲಿರುವ ಸೈಬರ್ ಠಾಣೆಯಲ್ಲಿ ದೂರು ಕೊಡಲು ಸೂಚಿಸುವ ಬಗ್ಗೆ ಕಮಿಷನರ್ ಹೇಳಿದ್ದಾರೆ. ಆದಷ್ಟು ಬೇಗ ಕ್ರಮಕೈಗೊಳ್ಳೋದಾಗಿಯೂ ಹೇಳಿದ್ದಾರೆ. ಎಲ್ಲಾ ಹೆಣ್ಮಕ್ಕಳ ಪರವಾಗಿ ದೂರು ನೀಡಿದ್ದೇನೆ. ಇದರಿಂದ ಸಮಾಜಕ್ಕೆ ಸಂದೇಶ ಹೋಗಬೇಕು.
ಚಿತ್ರರಂಗದಿಂದ ಹೆಣ್ಣುಮಕ್ಕಳಿಂದ ಸಂಪೂರ್ಣ ಬೆಂಬಲ ಇದೆ. ಆದರೆ ಚಿತ್ರರಂಗದವರು ನಮ್ಮ ಬೆಂಬಲಕ್ಕೆ ನಿಲ್ಲಲು ಭಯವಿದೆ. ನಾನು 2 ವರ್ಷದ ಹಿಂದೆಯೂ ಯಶ್, ಸುದೀಪ್ ವಿಚಾರದಲ್ಲೂ ಪೋಸ್ಟ್ ಮಾಡಿದ್ದೆ. ಆಗಲೂ ಮನೆಯವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದರು ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಕ್ಷಿತಾ ಹಾಗೂ ವಿಜಯಲಕ್ಷ್ಮೀ ನನ್ನ ಬಗ್ಗೆ ಮಾತನಾಡಿದ್ದಾರೆ ಅಂತ ನನಗೆ ಅನ್ನಿಸಲ್ಲ. ನ್ಯಾಯದ ಪರ ನನ್ನ ಹಕ್ಕಿನ ಪರ ನಾನು ಹಕ್ಕು ಚಲಾಯಿಸುತ್ತಿದ್ದೇನೆ ಎಂದಿದ್ದಾರೆ. ಇದೇ ವೇಳೆ, ನಟ ಪ್ರಥಮ್ ಸಹ ಬೆದರಿಕೆ ಬಗ್ಗೆ ದೂರು ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: `ಡಿ ಬಾಸ್’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್ ಪೇಜ್‌ನಲ್ಲಿ ಮನವಿ