ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕಣದ ತನಿಖೆಯಲ್ಲಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ನಿರಾಸಕ್ತಿ ತೋರಿಸುತ್ತಿದ್ದಾರೆ.
ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕಣದ ತನಿಖೆಯನ್ನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ಪೊಲೀಸರು ಚುರುಕುಗೊಳಿಸಿದ್ದಾರೆ. ಪ್ರಕರಣದ ಬಗ್ಗೆ ಸ್ಪಷ್ಟನೆ ಕೊಡುವಂತೆ ವಿಜಯ ಲಕ್ಷ್ಮೀ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.
ಈಗ ನನ್ನ ಮುಂದೆ ಇರುವ ದೊಡ್ಡ ಸಮಸ್ಯೆಯನ್ನ ಬಗೆಹರಿಸಿಕೊಂಡರೆ ಸಾಕಾಗಿದೆ. ಅದರ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿದ್ದೇನೆ. ಬೇರೆ ಯಾವುದಕ್ಕೂ ಕೂಡ ರಿಸ್ಕ್ ತೆಗೆದುಕೊಂಡು ಓಡಾಟ ಮಾಡುವುದಕ್ಕೆ ಆಗುವುದಿಲ್ಲ ಎಂಬ ಅರ್ಥದಲ್ಲಿ ಪೊಲೀಸರ ನೋಟಿಸಿಗೆ ಮೂರನೇ ವ್ಯಕ್ತಿಯಿಂದ ಮೌಖಿಕ ಉತ್ತರವನ್ನ ವಿಜಯಲಕ್ಷ್ಮಿ ಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲದ ರೂಲ್ಸ್ ದರ್ಶನ್‌ಗೆ ಯಾಕೆ?- ವಕೀಲರ ವಾದ
ಪ್ರಕರಣದ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿರುವುದರಿಂದ ವಿಜಯಲಕ್ಷ್ಮಿ ಅವರ ಹೇಳಿಕೆ ಪಡೆದು ನಂತರ ಅಶ್ಲೀಲ ಕಮೆಂಟ್ ಮಾಡಿದವರ ಬಗ್ಗೆ ಕಾನೂನು ಕ್ರಮ ಜರಗಿಸುವ ಪ್ಲಾನ್ ನಲ್ಲಿದ್ದಾರೆ. ಆದರೆ ಪ್ರಕರಣದ ಬಗ್ಗೆ ವಿಜಯಲಕ್ಷ್ಮಿ ಅವರಿಂದಲೇ ಸರಿಯಾದ ಸಹಕಾರ ಪೊಲೀಸರಿಗೆ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.
ಸೆನ್ ಠಾಣೆಯ ಸಹಕಾರದೊಂದಿಗೆ ಪೊಲೀಸರು ಅಶ್ಲೀಲವಾಗಿ ಕಮೆಂಟ್ ಮಾಡಿದ ಖಾತೆಗಳನ್ನು ಪತ್ತೆ ಮಾಡಲು ಆರಂಭಿಸಿದ್ದಾರೆ.