ವಾಷಿಂಗ್ಟನ್: ಚಿಪ್ ತಯಾರಕ ಎನ್‌ವಿಡಿಯಾ (Nvidia) ಮೈಕ್ರೋಸಾಫ್ಟ್ (Microsoft) ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ.
ಈ ವಾರ ಎನ್‌ವಿಡಿಯಾದ ಷೇರು ಮೌಲ್ಯ ಏರಿಕೆಯಾಗುತ್ತಾ ಸಾಗಿದ್ದರಿಂದ ಈಗ 3.34 ಲಕ್ಷ ಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ.
ಮೈಕ್ರೋಸಾಫ್ಟ್ 3.32 ಲಕ್ಷ ಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿದ್ದರೆ ಐಫೋನ್ ತಯಾರಕಾ ಆಪಲ್ (Apple) 3.29 ಲಕ್ಷ ಕೋಟಿ ಡಾಲರ್ ಮೌಲ್ಯದ ಕಂಪನಿಯಾಗಿದೆ. ಇದನ್ನೂ ಓದಿ: Mandya | ಕೆಆರ್‌ಎಸ್ ಡ್ಯಾಂನಿಂದ ಕಾವೇರಿ ನದಿಗೆ 45,000 ಕ್ಯೂಸೆಕ್ ನೀರು
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (AI) ಬೇಡಿಕೆ ಹೆಚ್ಚಾಗುತ್ತಿದ್ದಂತೆ ಚಿಪ್ ತಯಾರಕಾ ಕಂಪನಿಗಳ ಷೇರುಗಳ ಮೌಲ್ಯ ಏರಿಕೆ ಆಗುತ್ತಿದೆ. ಒಂದು ವರ್ಷದಲ್ಲಿ ಎನ್‌ವಿಡಿಯಾ ಷೇರು ಮೌಲ್ಯ 27% ಏರಿಕೆಯಾಗಿದ್ದರೆ ಕಳೆದ 5 ದಿನಗಳಲ್ಲಿ 7.13% ಏರಿಕೆಯಾಗಿದೆ. ಸದ್ಯ ಈಗ ಎನ್‌ವಿಡಿಯಾ 1 ಷೇರು 154.31 ಡಾಲರ್ (13,224 ರೂ.) ವಹಿವಾಟು ನಡೆಸುತ್ತಿದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಡಾಕಿಂಗ್ ಯಶಸ್ವಿ
ಈ ವರ್ಷದ ಅಂತ್ಯದಲ್ಲಿ ಎನ್‌ವಿಡಿಯಾ ಬ್ಲ್ಯಾಕ್‌ವೆಲ್ ಲೈನ್ ಸೇರಿದಂತೆ ಹೊಸ ಚಿಪ್‌ಗಳನ್ನು ಬಿಡುಗಡೆ ಮಾಡಲಿದ್ದು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರಿಯಲಿದೆ.