ಮಾಡರ್ನ್ ಲೈಫ್‌ಸ್ಟೈಲ್‌ಗೆ ಪೌಷ್ಟಿಕಾಂಶ ಭರಿತ ಚನಾ ಚಾಟ್

Public TV
1 Min Read

ಧುನಿಕ ಜೀವನಶೈಲಿಯ ವೇಗದಲ್ಲಿ ಆರೋಗ್ಯದ ಅನುಕೂಲಕ್ಕೆ ತಕ್ಕಂತೆ ನಾವು ಕೂಡಾ ಮುಂದುವರಿಯುವುದು ಅಗತ್ಯ. ಪೌಷ್ಟಿಕಾಂಶಯುಕ್ತ ಆಹಾರ ಎಂಬ ವಿಚಾರ ಬಂದಾಗ ಅಲ್ಲಿ ನಾವು ರುಚಿಕರ ತಿಂಡಿಗಳನ್ನು ಮರೆಯಬೇಕಾಗುವುದು ಅನಿವಾರ್ಯ. ಆದರೆ ನಾವಿಂದು ಸಮಕಾಲೀನ ಜೀವನಶೈಲಿಗೆ ಹೊಂದಿಕೊಳ್ಳುವ ಭಾರತೀಯ ಆಹಾರವೂ ಆದ ಆರೋಗ್ಯಕರ ಮಾತ್ರವಲ್ಲದೇ ರುಚಿಕರ ಸಿಂಪಲ್ ರೆಸಿಪಿಯನ್ನು ಹೇಳಿಕೊಡಲಿದ್ದೇವೆ. ಚನಾ ಚಾಟ್ ಇಂಡಿಯನ್ ಸ್ಟ್ರೀಟ್ ಫುಡ್ ಎನಿಸಿಕೊಂಡರೂ ಮನೆಯಲ್ಲಿ ಇನ್ನಷ್ಟು ಆರೋಗ್ಯಕರವಾಗಿ ತಯಾರಿಸಿ ನೀವೂ ಸವಿಯಿರಿ.

ಬೇಕಾಗುವ ಪದಾರ್ಥಗಳು:
ಕಪ್ಪು ಕಡಲೆ – ಒಂದೂವರೆ ಕಪ್ (ಬಿಳಿ, ಹಸಿರು ಕಡಲೆಯನ್ನೂ ಬಳಸಬಹುದು)
ಉಪ್ಪು – ಒಂದೂವರೆ ಟೀಸ್ಪೂನ್
ಟೊಮೆಟೋ – 1
ಈರುಳ್ಳಿ – ಅರ್ಧ
ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಚಾಟ್ ಮಸಾಲಾ ಪುಡಿ – ಎರಡೂವರೆ ಟೀಸ್ಪೂನ್
ನಿಂಬೆ ರಸ – 3 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಕಾಲು ಕಪ್ ಇದನ್ನೂ ಓದಿ: ಇಮ್ಯೂನಿಟಿ ಬೂಸ್ಟಿಂಗ್ ಹೆಸರು ಬೇಳೆಯ ಸೂಪ್ ಮಾಡಿ ಸವಿಯಿರಿ

ಮಾಡುವ ವಿಧಾನ:
* ಮೊದಲಿಗೆ ಕಪ್ಪು ಕಡಲೆಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
* ಪ್ರೆಶರ್ ಕುಕ್ಕರ್‌ಗೆ ನೆನೆಸಿದ ಕಡಲೆ ಹಾಕಿ, ಸಾಕಷ್ಟು ನೀರು ಸೇರಿಸಿ, ಉಪ್ಪು ಹಾಕಿ 3 ಸೀಟಿ ಬರುವವರೆಗೆ ಬೇಯಿಸಿಕೊಳ್ಳಿ.
* ನಂತರ ಅದನ್ನು ತಣ್ಣಗಾಗಲು ಬಿಟ್ಟು, ನೀರನ್ನು ಹರಿಸಿ, ಒಂದು ಮಿಕ್ಸಿಂಗ್ ಬೌಲ್‌ಗೆ ಬೇಯಿಸಿದ ಕಡಲೆಯನ್ನು ಹಾಕಿ.
* ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೋ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
* ನಂತರ ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ ಮತ್ತು ನಿಂಬೆ ರಸವನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಪೌಷ್ಟಿಕಾಂಶಯುಕ್ತ ಚನಾ ಚಾಟ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಚಳಿಗೆ ಬಿಸಿಬಿಸಿಯಾಗಿ ತಿನ್ನಿ ಮೂಂಗ್‌ದಾಲ್ ನಗ್ಗೆಟ್ಸ್

Share This Article