ಮದುವೆ ಹೊಸ್ತಿಲಲ್ಲಿದ್ದ ಇಸ್ರೇಲ್ ಯೋಧೆ ದಾರುಣ ಹತ್ಯೆ -‌ ಹಿಜ್ಬುಲ್ಲಾ ಬಂಡುಕೋರರ ದಾಳಿಗೆ ಬಲಿ

1 Min Read

ಟೆಲ್‌ ಅವೀವ್: ಮದುವೆ ಹೊಸ್ತಿಲಲ್ಲಿದ್ದ ಇಸ್ರೇಲ್‌ನ ಯೋಧೆ ದಾರುಣವಾಗಿ ಹತ್ಯೆಯಾಗಿದ್ದಾರೆ. ಹಿಜ್ಬುಲ್ಲಾ ಬಂಡುಕೋರರ (Hezbollah) ದಾಳಿಗೆ ಬಲಿಯಾಗಿದ್ದಾರೆ.

ನುರಿಯಲ್‌ ಡುಬಿನ್‌ (27) ಮೃತ ಯೋಧೆ. ಉತ್ತರ ಇಸ್ರೇಲ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರು ನಡೆಸಿದ ದಾಳಿಗೆ ಡುಬಿನ್‌ ತುತ್ತಾಗಿದ್ದರು. ಭಯೋತ್ಪಾದಕ ಸಂಘಟನೆಯು ಲೆಬನಾನಿನ ಪ್ರದೇಶದಿಂದ ಉತ್ತರ ಇಸ್ರೇಲ್‌ನಲ್ಲಿರುವ ಸಮುದಾಯಗಳ ಮೇಲೆ 38 ರಾಕೆಟ್‌ಗಳ ಭಾರಿ ದಾಳಿ ನಡೆಸಿದ ನಂತರ ಮೊಶಾವ್ ಮಾರ್ಗಲಿಯೊಟ್‌ನ ಡುಬಿನ್‌ ಹತ್ಯೆಗೀಡಾಗಿದ್ದಾರೆ. ಇದನ್ನೂ ಓದಿ: ಇರಾನ್‌ ನಮಗೆ ದೊಡ್ಡ ಗಿಫ್ಟ್‌ ಕೊಟ್ಟಿದೆ: ಹಾರ್ಮುಜ್‌ ಓಪನ್‌ ಬಗ್ಗೆ ಟ್ರಂಪ್‌ ಸುಳಿವು

ಮಚನಾಯಿಮ್ ಜಂಕ್ಷನ್ ಪ್ರದೇಶದಲ್ಲಿ ರಾಕೆಟ್‌ಗಳ ದಾಳಿ ನಡೆಸಲಾಯಿತು. ದಾಳಿಗೆ ಯೋಧೆ ಬಲಿಯಾಗಿದ್ದಾರೆ. ಇತರ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮ್ಯಾಗೆನ್ ಡೇವಿಡ್ ಆಡಮ್ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿ ಡುಬಿನ್‌ಗೆ ಜೀವ ಉಳಿಸುವ ವೈದ್ಯಕೀಯ ಚಿಕಿತ್ಸೆ ನೀಡಲು ಮುಂದಾದವು. ಆದರೆ, ಅಷ್ಟೊತ್ತಿಗೆ ಯೋಧೆ ಮೃತಪಟ್ಟಿದ್ದರು.

ಇದಕ್ಕೂ ಮೊದಲು ಇರಾನ್‌ನಿಂದ ಹಾರಿಸಿದ ಕ್ಷಿಪಣಿಯಿಂದ ಬೆಡೋಯಿನ್ ಸಮುದಾಯದ ವೈದ್ಯರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೂ ಗಾಯಗಳಾಗಿದ್ದವು. ಘಟನಾ ಸ್ಥಳಕ್ಕೆ ಕರೆಸಿಕೊಂಡ ಎಂಡಿಎ ತಂಡಗಳು ಮೂವರು ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಬೀರ್ ಶೆವಾದಲ್ಲಿರುವ ಸೊರೊಕಾ ಆಸ್ಪತ್ರೆಗೆ ಸ್ಥಳಾಂತರಿಸಿದವು. ನೆಗೆವ್ ಮತ್ತು ಗಾಜಾ ಸುತ್ತಮುತ್ತ ಸೈರನ್‌ಗಳು ಸದ್ದು ಮಾಡುತ್ತಿವೆ.

Share This Article