ರಾಜ್ಯದಲ್ಲಿ ಕೋವಿಡ್ ಕೇಸ್‌ಗಳ ಸಂಖ್ಯೆ ಹೆಚ್ಚಳ – ಬೆಂಗ್ಳೂರಲ್ಲೇ 32 ಪ್ರಕರಣ ದಾಖಲು

Public TV
1 Min Read

ಬೆಂಗಳೂರು: ಮತ್ತೆ ಕೊರೊನಾ (Corona) ಸೋಂಕು ಒಕ್ಕರಿಸಿದ್ದು, ರಾಜ್ಯದಲ್ಲಿ ಕೋವಿಡ್ ಕೇಸ್‌ಗಳ (Covid Case) ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಈ ಪೈಕಿ ಬೆಂಗಳೂರಿನಲ್ಲೇ 32 ಸಕ್ರಿಯ ಕೇಸ್‌ಗಳು ದಾಖಲಾಗಿವೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದ್ದು, ಕ್ರಮಗಳನ್ನು ಬಿಡುಗಡೆಗೊಳಿಸಿದೆ.ಇದನ್ನೂ ಓದಿ:ಇಶಾನ್‌ ಕಿಶನ್‌ ಸಿಡಿಲಬ್ಬರದ ಬ್ಯಾಟಿಂಗ್‌ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ

ಕೋವಿಡ್ ಮುಂಜಾಗ್ರತಾ ಕ್ರಮ ಏನು?
1. ಗರ್ಭಿಣಿಯರು, ಮಕ್ಕಳು, ವಯಸ್ಕರು ಮಾಸ್ಕ್ ಧರಿಸಿದ್ರೆ ಒಳ್ಳೆದು
2. ಗುಂಪು ಪ್ರದೇಶಗಳಲ್ಲಿ ಮಾಸ್ಕ್ ಹಾಕಿಕೊಳ್ಳಲು ಸಲಹೆ
3. ಸ್ಯಾನಿಟೈಸರ್ ಬಳಕೆಗೆ ಸಲಹೆ
4. ಐಎಲ್‌ಐ, ಸ್ಯಾರಿ ಲಕ್ಷಣ ಇರುವವರು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು

ಸಿಂಗಾಪುರ, ಹಾಂಕಾಂಗ್ ಬಳಿಕ ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎಲ್‌ಎಫ್.7 ಮತ್ತು ಎನ್‌ಬಿ.1.8 ತಳಿಗಳು ಪತ್ತೆಯಾಗಿದ್ದು, ಕೊರೊನಾದ ಜೆಎನ್.1 ಗೆ ಸೇರಿದೆ.ಇದನ್ನೂ ಓದಿ: ವಾಯುಸೀಮೆ ಬಳಸಲು ಪಾಕ್‌ ನಿರಾಕರಿಸಿದ ಬಳಿಕ ನಿಮಿಷಕ್ಕೆ 8,500 ಅಡಿಯಂತೆ ಇಳಿಸಿ ವಿಮಾನ ಲ್ಯಾಂಡಿಂಗ್‌!

Share This Article