ಸಿದ್ದು ಟೀಂನಿಂದಲೂ ನಂಬರ್‌ ಗೇಮ್?-‌ ರಹಸ್ಯವಾಗಿ ಶಾಸಕ ಪ್ರಸಾದ್‌ ಅಬ್ಬಯ್ಯ ಭೇಟಿಯಾದ ಯತೀಂದ್ರ

1 Min Read

– ಜೈಲಲ್ಲಿ ವೀರೇಂದ್ರ ಪಪ್ಪಿ, ವಿನಯ್‌ ಕುಲಕರ್ಣಿ ಭೇಟಿಯಾಗಿದ್ದ ಡಿಕೆಶಿ

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ನಂಬರ್‌ ಗೇಮ್‌ ಶುರುವಾದಂತೆ ಕಾಣುತ್ತಿದೆ. ಡಿ.ಕೆ.ಶಿವಕುಮಾರ್‌ ಗೇಮ್‌ಗೆ ಸಿದ್ದರಾಮಯ್ಯ ಟೀಂನಿಂದಲೂ ಕೌಂಟರ್‌ ಆಗಿ ನಂಬರ್‌ ಗೇಮ್‌ ಆರಂಭವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ನಂಬರ್‌ ಗೇಮ್‌ಗೆ ಖುದ್ದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅಖಾಡಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಮೊನ್ನೆ ಜೈಲಲ್ಲಿ ವೀರೇಂದ್ರ ಪಪ್ಪಿ, ವಿನಯ್‌ ಕುಲಕರ್ಣಿ ಅವರನ್ನು ಡಿ.ಕೆ.ಶಿವಕುಮಾರ್‌ ಭೇಟಿಯಾಗಿದ್ದರು. ಡಿಕೆ ಅಸ್ತ್ರಕ್ಕೆ ಸಿಎಂ ಟೀಂನಿಂದಲೂ ಪ್ರತ್ಯಾಸ್ತ್ರ ಪ್ರಯೋಗವಾದಂತೆ ಕಾಣುತ್ತಿದೆ. ಹುಬ್ಬಳ್ಳಿ ಶಾಸಕ ಪ್ರಸಾದ್ ಅಬ್ಬಯ್ಯರನ್ನು ಸಿಎಂ ಪುತ್ರ ಭೇಟಿಯಾಗಿದ್ದಾರೆ. ರಹಸ್ಯವಾಗಿ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿಯಾಗಿ ಯತೀಂದ್ರ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ಸಿಎಂ-ಖರ್ಗೆ ಭೇಟಿ ಕುತೂಹಲ – ಹೈಕಮಾಂಡ್‌ ತೀರ್ಮಾನ ಏನಿದ್ದರೂ ಬದ್ಧ ಎಂದ ಸಿದ್ರಾಮಯ್ಯ

ಹುಬ್ಬಳ್ಳಿಯ ಸಂತೋಷ ನಗರದಲ್ಲಿರುವ ಪ್ರಸಾದ್‌ ಅಬ್ಬಯ್ಯ ನಿವಾಸಕ್ಕೆ ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಅಬ್ಯಯ್ಯ, ಸಹಿ ಸಂಗ್ರಹಕ್ಕೆ ನನಗೆ ಯಾವುದೇ ಕರೆ ಬಂದಿಲ್ಲ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ. ಮುಖ್ಯಮಂತ್ರಿ ಬದಲಾವಣೆಗೆ ಹೈಕಮಾಂಡ್ ಚಿಂತಿಸಿಲ್ಲ ಎಂದು ತಿಳಿಸಿದ್ದಾರೆ.

ಸಿಎಂ ಪುತ್ರ ಬಂದು ಹೋದಮೇಲೆ ನವಲಗುಂದ ಶಾಸ ಕೋನರೆಡ್ಡಿ ಮತ್ತು ಪ್ರಸಾದ್ ಅಬ್ಬಯ್ಯ ಭೇಟಿಯಾಗಿದ್ದಾರೆ. ಕೋನರೆಡ್ಡಿ ಅವರು ಸಿಎಂ ಅತ್ಯಾಪ್ತ ಶಾಸಕರಾಗಿದ್ದಾರೆ. ಅವರು ಪ್ರಸಾದ್‌ ಅಬ್ಬಯ್ಯರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ಈ ಕುರಿತು ಮಾತನಾಡಿರುವ ಕೋನರೆಡ್ಡಿ, ನನ್ನ ಮತ್ತು ಪ್ರಸಾದ್‌ ಅಬ್ಬಯ್ಯ ಭೇಟಿ ವೈಯಕ್ತಿಕ ಅಷ್ಟೇ. ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್‌ ಸೂಚಿಸಿದೆ. ನಾನು ಮಾತನಾಡಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುರ್ಚಿ ಕದನದ ನಡುವೆ ಕುತೂಹಲ ಕೆರಳಿಸಿದ ಸಿಎಂ-ಖರ್ಗೆ ಭೇಟಿ

Share This Article