WTC – ಮತ್ತೆ ನಂ.1 ಸ್ಥಾನಕ್ಕೆ ಜಿಗಿದ ಭಾರತ – ಹಿಟ್‌ಮ್ಯಾನ್‌ ನಾಯಕತ್ವಕ್ಕೆ ಮೆಚ್ಚುಗೆ

Public TV
3 Min Read

ಮುಂಬೈ: ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿರುವ ಭಾರತ ತಂಡ (Team India) ಅಂತಿಮ ಟೆಸ್ಟ್‌ ಪಂದ್ಯಕ್ಕೂ ಮುನ್ನವೇ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದೆ. ಇದರಿಂದ ರೋಹಿತ್‌ ಶರ್ಮಾ ನಾಯಕತ್ವಕ್ಕೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ.

ರಾಂಚಿಯಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ 3ನೇ ಟೆಸ್ಟ್‌ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಂಡ ನಂತರ 64.58 ಪಿಸಿಟಿ (Percentage Of Points Earned), 62 ಅಂಕಗಳೊಂದಿಗೆ ಟೀಂ ಇಂಡಿಯಾ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲ 117 ಶ್ರೇಯಾಂಕಗಳೊಂದಿಗೆ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಆಸೀಸ್‌ ಜೊತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದು, ಅಂತಾರಾಷ್ಟ್ರೀಯ ಟಿ20 ಹಾಗೂ ಏಕದಿನ ಪಂದ್ಯಗಳ ರ‍್ಯಾಂಕಿಂಗ್‌ನಲ್ಲೂ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಇದನ್ನೂ ಓದಿ: WTC: ಭಾರತಕ್ಕೆ ಹೀನಾಯ ಸೋಲು – 209 ರನ್‌ಗಳ ಭರ್ಜರಿ ಜಯ, ಆಸೀಸ್‌ಗೆ ಚೊಚ್ಚಲ ಟ್ರೋಫಿ

WTC ನಲ್ಲಿ ಟಾಪ್‌-5 ತಂಡಗಳು:
2023-25ರ ನಡುವಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಈ ಆವೃತ್ತಿಯಲ್ಲಿ 8 ಪಂದ್ಯಗಳನ್ನಾಡಿದ್ದು, 5ರಲ್ಲಿ ಗೆಲುವು ಸಾಧಿಸಿದೆ. 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, 1 ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಒಟ್ಟಾರೆ 62 ಅಂಕಗಳನ್ನು ಪಡೆದಿರುವ ಟೀಂ ಇಂಡಿಯಾ 64.58 ಪಿಸಿಟಿಯೊಂದಿಗೆ ಅಗ್ರಸ್ಥಾನದಲ್ಲಿದೆ. 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿರುವ ಕಿವೀಸ್‌ 36 ಅಂಕಗಳೊಂದಿಗೆ (60.00 ಪಿಸಿಟಿ) 2ನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿರುವ ಆಸೀಸ್‌ 59.09 ಪಿಸಿಟಿಯೊಂದಿಗೆ 78 ಅಂಕ ಪಡೆದು 3ನೇ ಸ್ಥಾನ, 2 ಪಂದ್ಯಗಳಲ್ಲಿ 1ರಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ 12 ಅಂಕಗಳೊಂದಿಗೆ 4ನೇ ಸ್ಥಾನ ಹಾಗೂ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ 36.66 ಪಿಸಿಟಿಯೊಂದಿಗೆ 22 ಅಂಕ ಪಡೆದು 5ನೇ ಸ್ಥಾನದಲ್ಲಿದೆ. ಇದನ್ನೂ ಓದಿ: PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
* ಆಸ್ಟ್ರೇಲಿಯಾ – 37 ಪಂದ್ಯ – 4,345 ಅಂಕ – 117 ಶ್ರೇಯಾಂಕ
* ಭಾರತ – 32 ಪಂದ್ಯ – 3,746 ಅಂಕ – 117 ಶ್ರೇಯಾಂಕ
* ಇಂಗ್ಲೆಂಡ್‌ – 43 ಪಂದ್ಯ – 4,941 ಅಂಕ – 115 ಶ್ರೇಯಾಂಕ
* ನ್ಯೂಜಿಲೆಂಡ್‌ – 29 ಪಂದ್ಯ – 2,939 ಅಂಕ – 101 ಶ್ರೇಯಾಂಕ
* ದಕ್ಷಿಣ ಆಫ್ರಿಕಾ – 27 ಪಂದ್ಯ – 2,671 ಅಂಕ – 99 ಶ್ರೇಯಾಂಕ

ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
* ಭಾರತ – 58 ಪಂದ್ಯ – 7,020 ಅಂಕ – 121 ಶ್ರೇಯಾಂಕ
* ಆಸ್ಟ್ರೇಲಿಯಾ – 45 ಪಂದ್ಯ – 5,309 ಅಂಕ – 118 ಶ್ರೇಯಾಂಕ
* ದಕ್ಷಿಣ ಆಫ್ರಿಕಾ – 37 ಪಂದ್ಯ – 4,062 ಅಂಕ – 110 ಶ್ರೇಯಾಂಕ
* ಪಾಕಿಸ್ತಾನ – 36 ಪಂದ್ಯ – 3,922 ಅಂಕ – 109 ಶ್ರೇಯಾಂಕ
* ನ್ಯೂಜಿಲೆಂಡ್‌ – 46 ಪಂದ್ಯ – 4,708 ಅಂಕ – 102 ಶ್ರೇಯಾಂಕ

ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಟಾಪ್‌-5 ತಂಡಗಳು
* ಭಾರತ – 71 ಪಂದ್ಯ – 18,867 ಅಂಕ – 266 ಶ್ರೇಯಾಂಕ
* ಇಂಗ್ಲೆಂಡ್‌ – 48 ಪಂದ್ಯ – 12,305 ಅಂಕ – 256 ಶ್ರೇಯಾಂಕ
* ಆಸ್ಟ್ರೇಲಿಯಾ – 45 ಪಂದ್ಯ – 11,460 ಅಂಕ – 255 ಶ್ರೇಯಾಂಕ
* ನ್ಯೂಜಿಲೆಂಡ್‌ – 63 ಪಂದ್ಯ – 15,994 ಅಂಕ – 254 ಶ್ರೇಯಾಂಕ
* ಪಾಕಿಸ್ತಾನ – 58 ಪಂದ್ಯ – 14,454 ಅಂಕ – 249 ಶ್ರೇಯಾಂಕ

ಅಂತಿಮ ಟೆಸ್ಟ್‌ ಗೆಲ್ಲಲು ಭಾರತ ರಣತಂತ್ರ: ಬೆನ್‌ ಸ್ಟೋಕ್ಸ್‌ ಸಾರಥ್ಯದ ಇಂಗ್ಲೆಂಡ್‌ ತಂಡ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪೈಪೋಟಿ ನಡೆಸಿತು. ಮೊದಲ ಟೆಸ್ಟ್‌ ಗೆದ್ದು ತನ್ನ ಗುರಿ ಸಾಧನೆ ಕಡೆಗೆ ಮಹತ್ವದ ಹೆಜ್ಜೆಯನ್ನು ಇಟ್ಟರೂ, ಬಳಿಕ ಸತತ 3 ಸೋಲಿನೊಂದಿಗೆ ಟ್ರೋಫಿ ಗೆಲುವಿನ ಆಸೆ ಕೈಚೆಲ್ಲಿತು. ಈಗ ಸರಣಿಯ ಅಂತಿಮ ಪಂದ್ಯ ಧರ್ಮಶಾಲಾದ ಎಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 7 ರಿಂದ ಮಾರ್ಚ್‌ 11ರ ವರೆಗೆ ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಗೆದ್ದಿರುವ ಭಾರತ ಅಂತಿಮ ಪಂದ್ಯದಲ್ಲೂ ಆಗ್ಲರಿಗೆ ಸೋಲುಣಿಸಲು ರಣತಂತ್ರ ರೂಪಿಸಿದೆ.

Share This Article