‘ಆಸ್ಕರ್’ ವೇದಿಕೆಯ ಮೇಲೆ ಬೆತ್ತಲೆ: ಜಾನ್ ಸೇನಾ ವಿರುದ್ಧ ಭಾರೀ ಟೀಕೆ

Public TV
2 Min Read

ನಿನ್ನೆಯಷ್ಟೇ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಬ್ಲುಡಬ್ಲುಇ ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೇನಾ, ಬೆತ್ತಲೆಯಾಗಿ ವೇದಿಕೆಗೆ ಆಗಮಿಸಿದ್ದರು. ಈ ನಡೆ ಭಾರೀ ಟೀಕೆಗೆ ವ್ಯಕ್ತವಾಗಿದೆ. ಜಗತ್ತಿನ ಸಾಕಷ್ಟು ದಿಗ್ಗಜರು ಸೇರಿದಂತೆ ಸಿನಿ ಪ್ರೇಮಿಗಳು ಈ ನಡೆಯನ್ನು ಖಂಡಿಸಿದ್ದಾರೆ. ಪ್ರತಿಷ್ಠಿತ ವೇದಿಕೆಯಲ್ಲಿ ಇಂಥದ್ದೆಲ್ಲ ಆಗಬಾರದು ಎಂದು ಸಲಹೆ ನೀಡಿದ್ದಾರೆ.

ಆಸ್ಕರ್ ‍ಪ್ರಶಸ್ತಿ (Oscar Award) ಪ್ರದಾನ ಸಮಾರಂಭದಲ್ಲಿ ಒಂದಿಲ್ಲೊಂದು ಎಡವಟ್ಟು ನಡೆಯೋದು ಕಾಮನ್ ಅನ್ನುವಂತಾಗಿದೆ. ಕೆಲವನ್ನು ಆಸ್ಕರ್ ಸಮಿತಿಯೇ ಡಿಸೈನ್ ಮಾಡಿದರೆ, ಇನ್ನೂ ಕೆಲವು ತಾನಾಗಿಯೇ ಅಲ್ಲಿ ನಡೆದು ಬಿಡುತ್ತವೆ. ಈವರೆಗೂ ನಡೆದ ಎಲ್ಲ ಸಂಗತಿಗಳು ವೈರಲ್ ಆಗುವುದರ ಜೊತೆಗೆ ವಿವಾದವನ್ನೂ ಹುಟ್ಟು ಹಾಕಿವೆ.

ಈ ಬಾರಿಯ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿಯನ್ನು ಘೋಷಣೆ ಮಾಡುವುದಕ್ಕಾಗಿ ಖ್ಯಾತ ಹಾಲಿವುಡ್ ನಟ, ಡಬ್ಲುಡಬ್ಲುಇ ಸ್ಟಾರ್ ಜಾನ್ ಸೇನಾ  (John Cena)ಬೆತ್ತಲೆಯಾಗಿ (Nude) ವೇದಿಕೆಗೆ ಬಂದಿದ್ದರು. ಸ್ಟೋರಿ ಬೋರ್ಡ್ ನಿಂದ ಖಾಸಗಿ ಅಂಗಾಂಗ ಮುಚ್ಚಿಕೊಂಡು ಮೈಕ್ ಮುಂದೆ ನಿಂತಿದ್ದರು. ನಂತರ ಅವರಿಗೆ ವೇದಿಕೆಯ ಮೇಲೆ ಡಿಸೈನರ್ ಬಟ್ಟೆ ತೊಡಿಸಲಾದರೂ, ಈ ನಡೆ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಪ್ರತಿಷ್ಠಿತ 96ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕಾದ ಲಾಸ್ ಏಂಜಲೀಸ್ ನ ಡಾಲ್ಬಿ ಚಿತ್ರಮಂದಿರದಲ್ಲಿ ನಡೆಯಿತು. ಅತ್ಯಂತ ಕುತೂಹಲ ಮೂಡಿಸಿದ್ದ ನಾಮ ನಿರ್ದೇಶನ ಪಟ್ಟಿಯಲ್ಲಿ ಯಾರೆಲ್ಲ ಪ್ರಶಸ್ತಿ ಪಡೆಯಲಿದ್ದಾರೆ ಎನ್ನುವ ಸಹಜ ನಿರೀಕ್ಷೆ ಇದ್ದೇ ಇತ್ತು. ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿಯು ಓಪನ್ ಹೈಮರ್ ಸಿನಿಮಾಗಾಗಿ ಸಿಲಿಯನ್ ಮರ್ಫಿ ಪಡೆದುಕೊಂಡರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಪೂರ್ ಥಿಂಗ್ಸ್ ಸಿನಿಮಾಗಾಗಿ ಎಮ್ಮಾ ಸ್ಟೋನ್ ಪಡೆದುಕೊಂಡಿದ್ದಾರೆ.

 

ಅತ್ಯುತ್ತಮ ಚಿತ್ರ ಪ್ರಶಸ್ತಿಯು ಓಪನ್ ಹೈಮರ್ ಚಿತ್ರ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಓಪನ್ ಹೈಮರ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಓಪನ್ ಹೈಮರ್ ಚಿತ್ರದ ನಟನೆಗಾಗಿ ರಾಬರ್ಟ್ ಡೌನಿ ಜ್ಯೂ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಂದಿದ್ದರೆ, ದಿ ಹೋಲ್ಡೋವರ್ಸ್ ಸಿನಿಮಾದಲ್ಲಿನ ಅಭಿನಯಕ್ಕಾಗಿ ಡೇವಿನ್ ಜಾಯ್ ರಾಂಡೋಲ್ಫ್‍ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Share This Article