ಬೆತ್ತಲಾಗಿ ಗೆಳೆತಿ ಜೊತೆ ಟಿವಿ ನೋಡ್ತಿದ್ದವ ದಿಢೀರ್ ಅಂತ ಮನೆಯಿಂದ ಓಡಿ ಬಂದ

Public TV
2 Min Read

ವಾಷಿಂಗಟನ್: ವ್ಯಕ್ತಿಯೊಬ್ಬ ಬೆತ್ತಲಾಗಿ ಗೆಳೆತಿಯೊಂದಿಗೆ ಟಿವಿ ನೋಡುತ್ತಿದ್ದರು. ಈ ವೇಳೆ ಮನೆಯ ಹೊರಗೆ ನಿಲ್ಲಿಸಿದ್ದ ರೇಂಜ್ ರೋವರ್ ಕಾರನ್ನು ಕಳ್ಳನೊಬ್ಬ ಕದಿಯಲು ಯತ್ನಿಸಿದ್ದಾನೆ. ಕಾರ್ ಸೈರನ್ ಹೊಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ವ್ಯಕ್ತಿ ತಾನು ಬೆತ್ತಲನಾಗಿದ್ದೇನೆ ಎಂಬುದನ್ನು ಮರೆತು ಓಡಿ ಹೋಗಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ದೃಶ್ಯಗಳು ಮನೆಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

29 ವರ್ಷದ ಸ್ಟೀಫನ್ ಕುಲ್ಲೆನ್ ಕಳ್ಳನನ್ನು ಹಿಡಿದ ವ್ಯಕ್ತಿ. ಮಂಗಳವಾರ ರಾತ್ರಿ ಸುಮಾರು 11.30ಕ್ಕೆ ಸ್ಟೀಫನ್ ಗೆಳೆತಿ ನಿಕೋಲಾ ಜೊತೆ ಟಿವಿ ನೋಡುತ್ತಿದ್ದರು. ಈ ವೇಳೆ ಹೊರಗೆ ನಿಲ್ಲಿಸಿದ್ದ 7 ಲಕ್ಷ ರೂ. ಮೌಲ್ಯದ ರೇಂಜ್ ರೋವರ್ ಕಾರ್ ಕದಿಯಲು ಯತ್ನಿಸಿದ್ದಾನೆ. ಕಾರ್ ಸೈರನ್ ಬಾರಿಸುತ್ತಿದ್ದಂತೆ ಸ್ಟೀಫನ್ ಮನೆಯಿಂದ ಓಡಿ ಬಂದಿದ್ದಾರೆ. ಈ ವಿಡಿಯೋವನ್ನು ಗೆಳೆತಿ ನಿಕೋಲಾ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?
17 ವರ್ಷದ ಯುವಕನೊಬ್ಬ ಮನೆಯ ಮುಂಭಾಗದಲ್ಲಿರುವ ಕಾರ್ ಬಳಿ ಬರುತ್ತಾನೆ. ಏನೇನೂ ಪ್ರಯತ್ನ ಮಾಡಿ ಕಾರಿನ ಬಾಗಿಲನ್ನು ತೆಗೆದು ಒಳಗೆ ಕುಳಿತುಕೊಳ್ಳುತ್ತಾನೆ. ಕಾರ್ ಬಾಗಿಲು ತೆರೆಯುತ್ತಿದ್ದಂತೆ ಸೈರನ್ ಹೊಡೆದುಕೊಳ್ಳಲು ಆರಂಭಿಸಿದೆ. ಇತ್ತ ಮನೆಯಿಂದ ಸ್ಟೀಫನ್ ಬೆತ್ತಲಾಗಿ ಓಡಿ ಬರುತ್ತಿರೋದನ್ನು ಗಮನಿಸಿದ ಯುವಕ ಕಾರಿನಿಂದ ಇಳಿದು ಓಡಲಾರಂಭಿಸಿದ್ದಾನೆ. ಸ್ಟೀಫನ್ ಓಡಿ ಹೋಗಿ ಕಳ್ಳನನ್ನು ಹಿಡಿದು ಕೆಳಗೆ ಬೀಳಿಸಿ ಥಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ಕಾರಿನ ಸೈರನ್ ಕೇಳುತ್ತಿದ್ದಂತೆ ನಾನು ಕಿಟಕಿಯಿಂದ ಹೊರ ಧುಮುಕಿ ಬಂದೆ. ನಾನು ನನ್ನ ಕಾರನ್ನು ತುಂಬಾ ಪ್ರೀತಿಸುತ್ತೇನೆ. ಅದನ್ನು ಬೇರೆಯವರು ತೆಗೆದುಕೊಂಡು ಹೋಗಲು ಬಿಡೋದಿಲ್ಲ. ರಸ್ತೆಯಲ್ಲಿ ಓಡಿ ಹೋದ ಮೇಲೆ ನಾನು ಯಾವುದೇ ಬಟ್ಟೆಯನ್ನು ಹಾಕಿಲ್ಲ ಎಂಬುವುದು ನನಗೆ ಗೊತ್ತಾಯಿತು ಎಂದು ಕಾರ್ ಮಾಲೀಕ ಸ್ಟೀಫನ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೀಫನ್ ಗೆಳೆತಿ ನಿಕೋಲಾ, ರಾತ್ರಿ 11.30ರ ವೇಳೆಯಲ್ಲಿ ನಾವಿಬ್ಬರು ಟಿವಿ ನೋಡುತ್ತಿದ್ದೇವು. ಕಾರಿನ ಸೈರನ್ ಬಾರಿಸುತ್ತಿದ್ದಂತೆ ಒಂದು ಕ್ಷಣವು ತಡಮಾಡದೇ ಸ್ಟೀಫನ್ ಕಿಟಕಿಯಿಂದ ಜಿಗಿದು ಕಳ್ಳನನ್ನು ಹಿಡಿದ್ರು ಅಂತಾ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *